ಜ್ಞಾನ ಹೆಚ್ಚಿಸಿಕೊಳ್ಳುವ ಅವಕಾಶ ಹುಡುಕಿ: ಶಶಿಭೂಷಣ ಹೆಗಡೆ

| Published : Oct 06 2024, 01:23 AM IST

ಜ್ಞಾನ ಹೆಚ್ಚಿಸಿಕೊಳ್ಳುವ ಅವಕಾಶ ಹುಡುಕಿ: ಶಶಿಭೂಷಣ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ಎಂಜಿಸಿ ಕಲಾ, ವಾಣಿಜ್ಯ ಮತ್ತು ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭ ಜರುಗಿತು. ಪ್ರಾಚಾರ್ಯರು ಎಲ್ಲ ೧೬ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಿದ್ದಾಪುರ: ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಮತ್ತು ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ್ ಹೆಗಡೆ ಮಾತನಾಡಿ, ನಮ್ಮ ದೇಶದ ಯುವ ಸಂಪತ್ತಾದ ವಿದ್ಯಾರ್ಥಿ ಸಮೂಹ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ಹುಡುಕಬೇಕು ಎಂದರು.

ಜಿ.ಎ. ಹೆಗಡೆ ಸೋಂದಾ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯನಿಷ್ಠೆ, ಜವಾಬ್ದಾರಿಯ ಕುರಿತು ಹಲವಾರು ಪುರಾಣ ಕಥೆಗಳ ನಿದರ್ಶನಗಳನ್ನು ನೀಡುವ ಮೂಲಕ ಬೇರೆ ಬೇರೆ ವಿಷಯದ ಅಧ್ಯಯನದ ಪ್ರಾಮುಖ್ಯ ವಿವರಿಸಿದರು. ಎಂಜಿಸಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಡೀನ್ ಡಾ. ಎಸ್.ಎಸ್. ಗುತ್ತಿಕರ್ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ದೊರೆಯುವ ಹಲವಾರು ಚಟುವಟಿಕೆಯನ್ನು ಕಾಲೇಜಿನಲ್ಲಿ ನಡೆಸಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಜಗನ್ನಾಥ್ ಮೊಗೇರ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವು ಅನೇಕ ಪಠ್ಯೇತರ ಚಟುವಟಿಕೆ ನಡೆಸಲು ಅನುವು ಮಾಡಿಕೊಡುತ್ತದೆ. ಎಲ್ಲ ವಿದ್ಯಾರ್ಥಿಗಳು ತಮ್ಮನ್ನು ತಾವು ಎಲ್ಲ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯರು ಎಲ್ಲ ೧೬ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಂಬಿಕಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷೆ ಪ್ರೊ. ಚೇತನಾ ಎಂ.ಎಚ್. ಪ್ರಾಸ್ತಾವಿಕವಾಗಿ ಮಾತನ್ನಾಡಿದರು. ಪ್ರೊ. ಕಿರಣಕುಮಾರ್ ನೂತನ ಸಂಸತ್ತಿನ ಪರಿಚಯ ಮಾಡಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಆಶಿತಾ ಗೌಡರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದರ್ಶನ್ ಎಂ. ಗೌಡ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಅಂಜುಮ್ ಸಾಬ್ ಅವರು ಕಾರ್ಯಕ್ರಮ ನಿರೂಪಿಸಿದರು.