ಆ.೨ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲತ್ತೂರು ಕೆ. ರಾಜೇಶ್ ಬಿಸಿಎಂ‘ಬಿʼಪ್ರಮಾಣ ಪತ್ರ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್ ಜಯಪ್ರಕಾಶ್ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಎಫ್ಐಆರ್ ದಾಖಲಾಗಿದೆ. ಬಿಸಿಎಂ ‘ಬಿʼ ಪ್ರಮಾಣ ಪತ್ರ ಪಡೆಯಲು ಆಲತ್ತೂರು ಕೆ. ರಾಜೇಶ್ ಅವರು ಸುಳ್ಳು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್ ಜಯಪ್ರಕಾಶ್ ಗುಂಡ್ಲುಪೇಟೆ ಠಾಣಾ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಆ.೨ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲತ್ತೂರು ಕೆ. ರಾಜೇಶ್ ಬಿಸಿಎಂ‘ಬಿʼಪ್ರಮಾಣ ಪತ್ರ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್ ಜಯಪ್ರಕಾಶ್ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಎಫ್ಐಆರ್ ದಾಖಲಾಗಿದೆ. ಬಿಸಿಎಂ ‘ಬಿʼ ಪ್ರಮಾಣ ಪತ್ರ ಪಡೆಯಲು ಆಲತ್ತೂರು ಕೆ. ರಾಜೇಶ್ ಅವರು ಸುಳ್ಳು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್ ಜಯಪ್ರಕಾಶ್ ಗುಂಡ್ಲುಪೇಟೆ ಠಾಣಾ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದರು.ಪೊಲೀಸರು ಶನಿವಾರ ಅಳೆದು, ತೂಗಿ ಲೀಗಲ್ ಪಡೆದು ಗ್ರೇಡ್ ೨ ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಪಿಎಲ್‌ಡಿ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲತ್ತೂರು ಕೆ. ರಾಜೇಶ್ ಮೇಲೆ ಬಿಎನ್‌ಎಸ್ ೨೧೨ರಂತೆ ದೂರು ದಾಖಲಿಸಿಕೊಂಡಿದ್ದಾರೆ.