ಸಿದ್ದಾಪುರ:

ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೆಗ್ನೂರ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ರೈತರೊಬ್ಬರ ಬದುಕಿನ ಆಧಾರವಾಗಿದ್ದ ಅಡಕೆ ತೋಟದ 300ಕ್ಕೂ ಹೆಚ್ಚು ಅಡಕೆ ಮರಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ನಾಶವಾಗಿದೆ.

ಹೆಗ್ನೂರ್ ನಿವಾಸಿ ಸದಾನಂದ ಹೆಗಡೆ ಎಂಬವರಿಗೆ ಸೇರಿದ ತೋಟಕ್ಕೆ ಬುಧವಾರ ಮಧ್ಯಾಹ್ನದ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ತೋಟದಾದ್ಯಂತ ವ್ಯಾಪಿಸಿದ ಬೆಂಕಿಯು ಭೀಕರ ರೂಪ ತಾಳಿದೆ. ಈ ದುರ್ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಫಸಲು ನೀಡುವ ಅಡಕೆ ಮರಗಳು ಹಾಗೂ ಹೊಸದಾಗಿ ನೆಡಲಾಗಿದ್ದ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿವೆ.ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಮೇಲೆ ಪ್ರಕರಣ ದಾಖಲು

ಸಿದ್ದಾಪುರ ತಾಲೂಕಿನ ಬಿಕ್ಕಳಸೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿದ್ದಾಪುರದ ಇಜಾಜ್ ಅಹಮ್ಮದ್ ಬುಡಾನ್ ಶೇಖ್ ಎಂಬಾತನ ವಿರುದ್ಧ ಸಿದ್ದಾಪುರ ಪೊಲೀಸರು ಮಂಗಳವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ.

ಮಾ. ೧೫ರಂದು ಯುವತಿ ತನ್ನ ಮನೆಯ ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆರಂಭದಲ್ಲಿ ಈ ಘಟನೆಯನ್ನು ಅಸಹಜ ಸಾವು ಎಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ ಹಿಂದೂ ಸಂಘಟನೆಗಳು, ತಾಲೂಕು ಬಿಜೆಪಿ ಘಟಕ ಇದು ಲವ್ ಜಿಹಾದ್ ಎಂದು ಆರೋಪಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ, ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಸತ್ಯಾಸತ್ಯತೆ ಬಯಲಿಗೆಳೆಯುವಂತೆ ಒತ್ತಾಯಿಸಿದ್ದರು.


ಆರೋಪಿ ಇಜಾಜ್ ಅಹಮ್ಮದ್ ತಾನು ಹಿಂದೂ ಎಂದು ನಂಬಿಸಿ ಮಲ್ಲಿಕಾಳನ್ನು ಪ್ರೀತಿಸಿದ್ದ. ಆದರೆ ನಂತರ ಆಕೆಯನ್ನು ಮದುವೆಯಾಗಲು ನಿರಾಕರಿಸಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದ. ಈ ಇದರಿಂದ ಮನನೊಂದ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ಕುಟುಂಬದವರು ದೂರಿನಲ್ಲಿ ಆರೋಪಿಸಿದ್ದಾರೆ.