ದೊಡ್ಡಬಳ್ಳಾಪುರ: ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಹೊಸ ಕಟ್ಟಡ ಆವರಣದಲ್ಲಿ ಆಯೋಜಿಸಿದ್ದ, ಮದ್ಯ ಮಳಿಗೆಗಳಲ್ಲಿ ಸಂಭವಿಸುವ ಅಗ್ನಿ ಅವಘಡದಿಂದ ಪಾರಾಗುವ ಕುರಿತು ಮದ್ಯದಂಗಡಿಗಳ ಸನ್ನದುದಾರರಿಗೆ ಮತ್ತು ಸಾರ್ವಜನಿಕರಿಗೆ ಅಣಕು ಪ್ರದರ್ಶನದ ಮೂಲಕ ಅರಿವು ಮೂಡಿಸಲಾಯಿತು

ದೊಡ್ಡಬಳ್ಳಾಪುರ: ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಹೊಸ ಕಟ್ಟಡ ಆವರಣದಲ್ಲಿ ಆಯೋಜಿಸಿದ್ದ, ಮದ್ಯ ಮಳಿಗೆಗಳಲ್ಲಿ ಸಂಭವಿಸುವ ಅಗ್ನಿ ಅವಘಡದಿಂದ ಪಾರಾಗುವ ಕುರಿತು ಮದ್ಯದಂಗಡಿಗಳ ಸನ್ನದುದಾರರಿಗೆ ಮತ್ತು ಸಾರ್ವಜನಿಕರಿಗೆ ಅಣಕು ಪ್ರದರ್ಶನದ ಮೂಲಕ ಅರಿವು ಮೂಡಿಸಲಾಯಿತು.

''''ಮದ್ಯ ಮಳಿಗೆಯ ಅಗ್ನಿ ಅವಘಡ ಕುರಿತು ಅಣಕು ಪ್ರದರ್ಶನ''''ದಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ, ಮದ್ಯದಂಗಡಿ ಮತ್ತು ಬಾರ್ ರೆಸ್ಟೋರೆಂಟ್‌ಗಳಲ್ಲಿ ತಕ್ಷಣ ಅಗ್ನಿ ಅವಘಡ ಸಂಭವಿಸಿದರೆ ಏನು ಕ್ರಮಕೈಗೊಳ್ಳಬೇಕು, ಮೊದಲೇ ಬೆಂಕಿ ಅನಾಹುತ ಪತ್ತೆ ಹಚ್ಚುವ, ತಡೆಯುವ ವಿಧಾನಗಳು, ರಕ್ಷಣಾ ಕ್ರಮಗಳು ಮತ್ತು ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಪ್ರಾಯೋಗಿಕವಾಗಿ ಮುಂಜಾಗ್ರತಾ ಅರಿವು ಮೂಡಿಸಿದರು.

ಅಬಕಾರಿ ಉಪ ಆಯುಕ್ತ ಕ್ಯಾ.ಅಜಿತ್ ಕುಮಾರ್ ಮಾತನಾಡಿ, ಎಲ್ಲ ಮಾದರಿಯ ಮದ್ಯದಂಗಡಿಗಳು ಅಗ್ನಿ ಸುರಕ್ಷತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಬಕಾರಿ ಅಧೀಕ್ಷಕ ಡಿ.ಎನ್. ತಿಪ್ಪೇಸ್ವಾಮಿ, ಜಿಲ್ಲೆಯ ನಾಲ್ಕು ತಾಲೂಕಿನ ಅಬಕಾರಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ, ಮದ್ಯದಂಗಡಿಗಳ ಸನ್ನದುದಾರರು ಹಾಜರಿದ್ದರು.

7ಕೆಡಿಬಿಪಿ1-

ಬೆಂ.ಗ್ರಾ. ಜಿಪಂ ಕಾರ್ಯಾಲಯದಲ್ಲಿ ಮದ್ಯ ಮಳಿಗೆ ಅಗ್ನಿ ಅವಘಡ ಅಣಕು ಪ್ರದರ್ಶನ ನಡೆಯಿತು.