ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ, ಅಗ್ನಿಶಾಮಕ ದಳ ಹುಡುಕಾಟ

| Published : Aug 22 2025, 12:00 AM IST

ಸಾರಾಂಶ

ಎಸ್ ಕೆ ಇಎಸ್ ಶಾಲೆಯ 4 ಮಂದಿ ವಿದ್ಯಾರ್ಥಿಗಳು ಬಿ.ಹೊಸೂರಿನ ಬಿಸಿಎಂ ಹಾಸ್ಟೆಲ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಇದ್ದ ವಿ.ಸಿ.ನಾಲೆಯಲ್ಲಿ ಈಜಾಡಲು ತೆರಳಿದ್ದಾರೆ. ನಾಲೆಯಲ್ಲಿ ಈಜಾಡಿದ್ದ ದರ್ಶನ್ ಸುಸ್ತಾಗಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ವಿಷಯ ತಿಳಿದು ಮಂಡ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ತಡರಾತ್ರಿವರೆಗೂ ಹುಡುಕಾಟ ನಡೆಸಿದರೂ ಬಾಲಕ ಪತ್ತೆ ಆಗಿಲ್ಲ.

ಮಂಡ್ಯ: ವಿ.ಸಿ.ನಾಲೆಯಲ್ಲಿ ಈಜಾಡುತ್ತಿದ್ದ ವಿದ್ಯಾರ್ಥಿ ಕೊಚ್ಚಿ ಹೋಗಿರುವ ಘಟನೆ ಬಿ.ಹೊಸೂರು ಸಮೀಪದಲ್ಲಿ ಗುರುವಾರ ಸಂಜೆ ನಡೆದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸಂಜೆವರೆಗೂ ನಾಲೆಯಲ್ಲಿ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಲಿಲ್ಲ. ದುದ್ದ ಹೋಬಳಿಯ ಬೆಟ್ಟಹಳ್ಳಿ ಸೈಟ್ 9ನೇ ತರಗತಿ ಓದುತ್ತಿರುವ ದರ್ಶನ್ (14) ಕೊಚ್ಚಿ ಹೋಗಿದ್ದಾನೆ. ಎಸ್ ಕೆ ಇಎಸ್ ಶಾಲೆಯ 4 ಮಂದಿ ವಿದ್ಯಾರ್ಥಿಗಳು ಬಿ.ಹೊಸೂರಿನ ಬಿಸಿಎಂ ಹಾಸ್ಟೆಲ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಇದ್ದ ವಿ.ಸಿ.ನಾಲೆಯಲ್ಲಿ ಈಜಾಡಲು ತೆರಳಿದ್ದಾರೆ. ನಾಲೆಯಲ್ಲಿ ಈಜಾಡಿದ್ದ ದರ್ಶನ್ ಸುಸ್ತಾಗಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ವಿಷಯ ತಿಳಿದು ಮಂಡ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ತಡರಾತ್ರಿವರೆಗೂ ಹುಡುಕಾಟ ನಡೆಸಿದರೂ ಬಾಲಕ ಪತ್ತೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮರುದಿನಕ್ಕೆ ಮುಂದೂಡಿ ವಾಪಸಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಡ್ಯ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ಸಿಬ್ಬಂದಿ ವಿಶ್ವನಾಥ್, ಅಪ್ಪಯ್ಯ, ಪೂಜಾರ್, ನಿರಂಜನ್,ರೆವಪ್ಪ, ಚಾಲಕ ಬಾಳೆಗೌಡ ಪಾಲ್ಗೊಂಡಿದ್ದರು. ಸ್ಥಳಕ್ಕೆ ಎಸ್ ಪಿ ಬಾಲದಂಡಿಯವರು ಭೇಟಿ ನೀಡಿ ಪರಿಶೀಲಿಸಿದರು.