ಶ್ಯಾದನಹಳ್ಳಿಯ ಶಂಭು ಮತ್ತು ಕಾಲ ಎಂಬ ಜೋಡೆತ್ತುಗಳಿಗೆ ಪ್ರಥಮ ಬಹುಮಾನ

| Published : Jan 02 2025, 12:31 AM IST

ಶ್ಯಾದನಹಳ್ಳಿಯ ಶಂಭು ಮತ್ತು ಕಾಲ ಎಂಬ ಜೋಡೆತ್ತುಗಳಿಗೆ ಪ್ರಥಮ ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಕಾಲ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 50 ಕ್ಕೂ ಅಧಿಕ ಜೋಡಿ ಎತ್ತುಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಒಂದು ಹಳ್ಳಿಕಾರ್ ತಳಿ ಹಾಗೂ ಒಂದು ಗೂಳಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಶ್ಯಾದನಹಳ್ಳಿ ದಣ್ಣಮ ಯುವಕರ ಬಳಗ ದೋಸ್ತಿ ದರ್ಬಾರ್ ಸಹಯೋಗದಲ್ಲಿ ಪ್ರಥಮ ಬಾರಿಗೆ ನಡೆದ ಅಂತರ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಶ್ಯಾದನಹಳ್ಳಿಯ ಶಂಭು ಮತ್ತು ಕಾಲ ಎಂಬ ಜೋಡೆತ್ತುಗಳು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ಗ್ರಾಮದ ಹೊರವಲಯದಲ್ಲಿ ಎರಡು ದಿನಗಳ ಕಾಲ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 50 ಕ್ಕೂ ಅಧಿಕ ಜೋಡಿ ಎತ್ತುಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಒಂದು ಹಳ್ಳಿಕಾರ್ ತಳಿ ಹಾಗೂ ಒಂದು ಗೂಳಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಶ್ಯಾದನಹಳ್ಳಿ ಶಂಭು ಮತ್ತು ಕಾಲ ಎಂಬ ಜೋಡೆತ್ತುಗಳು ಸ್ಪರ್ಧೆಯ ಐದು ರೌಂಡ್‌ಗಳಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ಪ್ರಥಮ ಸ್ಥಾನಗಳಿಸಿ 60 ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿ ಪಡೆದುಕೊಂಡವು. ಫೈನಲ್ ರೌಂಡ್‌ನಲ್ಲಿ ಶ್ಯಾದನಹಳ್ಳಿ ಶಂಭು ಮತ್ತು ಕಾಲ ಎದುರು ಸ್ಪರ್ಧಿ ಸೋಲುಂಟ ಚಿನಕುರಳಿಯ ಹಳ್ಳಿದೊರೆ ಕೃಪೆ ಕಾವೇರಿ ರಾಕಿ ಹಾಗೂ ಹಾವೇರಿ ಎತ್ತುಗಳು ದ್ವಿತೀಯ ಸ್ಥಾನವನ್ನು ಪಡೆದು 40 ಸಾವಿರ ನಗದು, ಟ್ರೋಪಿ ಪಡೆದುಕೊಂಡರು.

ಅರಕಲಗೂಡಿನ ರಾಕ್ ಹಾಗೂ ಜಲ್ವ ಎತ್ತುಗಳು ತೃತೀಯ ಸ್ಥಾನ ಪಡೆದು 30 ಸಾವಿರ ನಗದು ಟ್ರೋಪಿ, ತರೀಕೆರೆಯ ಕೊಯ್ಲಿ ಮತ್ತು ಡೆವಿಲ್ ಜೋಡೆತ್ತುಗಳು ನಾಲ್ಕನೇ ಸ್ಥಾನಪಡೆದು 15 ಸಾವಿರ ನಗದು, ಟ್ರೋಪಿ ಪಡೆದವು. ಐದನೇ ಸ್ಥಾನವನ್ನು ಕ್ಯಾತನಹಳ್ಳಿಯ ಹೊನ್ನದೇವಿ ಕೃಪೆಯ ಕಿರಣ್, ಮೈಲಾರಿಲಿಂಗೇಶ್ವರ ಪ್ರಸನ್ನ ಸರ್ದಾರ್ ಬಸ್ಯ ಹಾಗೂ ಜಾಗಟೇಮಲ್ಲೇನಹಳ್ಳಿಯ ಶ್ರೀಲಕ್ಷ್ಮೀದೇವಿ ಕಿರಣ್, ಬನ್ನಾರಿ ಎಕ್ಸ್‌ಪ್ರೆಸ್ ಬಾಲು, ಜಯರಾಮು ಅವರಿಗೆ ನೀಡಲಾಯಿತು.

ಚಾಂಪಿಯನ್ ಡ್ರೈವರ್ಸ್‌ಗಳಾಗಿ ಹೊರಹೊಮ್ಮಿದ ಚಿಕ್ಕಾಡೆಯ ಮಾಹಿ ಹಾಗೂ ಪಾಟೀಲ್ ಅವರನ್ನು ಅಭಿನಂಧಿಸಿದರು. ಎರಡು ದಿನಗಳ ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗಳ ಸಂಭವಿಸಿದಂತೆ ಪೊಲೀಸ್ ಭದ್ರತೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಶ್ಯಾದನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡುವ ಮೂಲಕ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿದಕ್ಕೆ ಆಯೋಜನಕರು ಅಭಿನಂಧನೆಸಲ್ಲಿಸಿದರು.