ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆ ಕೆಲ ಕಾಲ ಸಾಧಾರಣ ಮಳೆ ಸುರಿದಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆ ಕೆಲ ಕಾಲ ಸಾಧಾರಣ ಮಳೆ ಸುರಿದಿದೆ.

ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ಸುಂಟಿಕೊಪ್ಪ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆ ಹನಿ ಸುರಿದಿದೆ. ದಕ್ಷಿಣ ಕೊಡಗಿನ ಕುಟ್ಟ, ಬಿರುಣಾಣಿ ಸೇರಿದಂತೆ ಹಲವು ಕಡೆ ತುಂತುರು ಮಳೆಯಾಯಿತು.

ಭಾನುವಾರ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವಿವಿಧ ಕಡೆ ಮೋಡ ಕವಿದ ವಾತಾವರಣವಿತ್ತು. ಇದೀಗ ಕಾಫಿ ಕೊಯ್ಲಿನ ಸಮಯ ಆಗಿರುವುದರಿಂದ ಮಳೆಯಾದಲ್ಲಿ ನಷ್ಟ ಸಂಭವಿಸುವ ಭೀತಿಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರಿದ್ದಾರೆ.‌