ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದ ಸಾವಿರಾರು ಜನ

| Published : Apr 30 2024, 02:03 AM IST

ಸಾರಾಂಶ

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ವಿ. ಶ್ರೀನಿವಾಸಪ್ರಸಾದ್ ಅವರ ನಿವಾಸ ಭೀಮಸದನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಮಧ್ಯಾಹ್ನ 3ರ ನಂತರ ಜಯಲಕ್ಷ್ಮೀಪುರಂನಿಂದ ಅಶೋಕಪುರಂನಲ್ಲಿರುವ ಎನ್.ಟಿ.ಎಂ.ಎಸ್ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುನೂರಾರು ಗಣ್ಯರು, ಸಹಸ್ರಾರು ಅಭಿಮಾನಿಗಳು ಅಗಲಿದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ವಿ. ಶ್ರೀನಿವಾಸಪ್ರಸಾದ್ ಅವರ ನಿವಾಸ ಭೀಮಸದನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಮಧ್ಯಾಹ್ನ 3ರ ನಂತರ ಜಯಲಕ್ಷ್ಮೀಪುರಂನಿಂದ ಅಶೋಕಪುರಂನಲ್ಲಿರುವ ಎನ್.ಟಿ.ಎಂ.ಎಸ್ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಯಿತು.ಎರಡು ಕಡೆ ಅವರ ಅಭಿಮಾನಿಗಳು, ಗಣ್ಯರು, ವಿವಿಧ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಆಗಮಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದು ಭಾವುಕರಾದರು. ಅಶೋಕಪುರಂ ನೀರವ ಮೌನಇನ್ನೂ ವಿ. ಶ್ರೀನಿವಾಸಪ್ರಸಾದ್ ಅವರ ನಿಧನ ಹಿನ್ನೆಲೆಯಲ್ಲಿ ಅವರ ಹುಟ್ಟಿದ್ದ ಅಶೋಕಪುರಂನಲ್ಲಿ ನೀರವ ಮೌನ ಆವರಿಸಿತ್ತು. ಅಶೋಕಪುರಂನ ಮುಖ್ಯ ರಸ್ತೆಯಲ್ಲಿ ಅವರ ಅಭಿಮಾನಿಗಳು ಬೃಹತ್ ಕಟೌಟ್, ಫ್ಲೆಕ್ಸ್ ಅಳವಡಿಸಿ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದರು. ಪೊಲೀಸರು ಶಾಲೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಂಡಿದ್ದರು. ಭಾವುಕರಾದ ವಾಸುಸಂಸದ ವಿ. ಶ್ರೀನಿವಾಸಪ್ರಸಾದ್ ಅವರನ್ನು ನೆನೆದು ಅವರ ಬಹುಕಾಲದ ಒಡನಾಡಿಯಾಗಿದ್ದ ಕೆ.ಆರ್. ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್. ವಾಸು ಅವರು ಭಾವುಕರಾದರು. ಪ್ರಸಾದ್ ಅವರ ಕುರಿತು ಮಾತನಾಡುವ ವೇಳೆ ವಾಸು ಗದ್ಗದಿತರಾದರು.ಇದೇ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಮುಖಂಡ ನಂದಕುಮಾರ್ ಅವರು ಅಗಲಿದ ಹಿರಿಯ ನಾಯಕನ ಗುಣಗಾನ ಮಾಡಿದರು.----ಕೋಟ್...ಮಂಗಳವಾರ ತನಕ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ. ಬರುವಂತಹ ಅಭಿಮಾನಿಗಳು, ಬೆಂಬಲಿಗರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.- ಟಿ.ಎಸ್. ಶ್ರೀವತ್ಸ, ಶಾಸಕ/