ಸಾರಾಂಶ
ಪುರಭವನದಲ್ಲಿ ನಡೆದ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘದ ೨೦೨೩-೨೦೨೪ನೇ ಸಾಲಿನ ೧೪ನೇ ವಾರ್ಷಿಕ ಮಹಾಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾದ್ಯಂತ ಮೀನುವ್ಯಾಪಾರದಲ್ಲಿ ತೊಡಗಿರುವ ಹಿರಿಯ ಮೀನುಗಾರ ಮಹಿಳೆಯರಿಗೆ ಸರ್ಕಾರ ಪಿಂಚಣಿ ಸೌಲಭ್ಯವನ್ನು ಒದಗಿಸಬೇಕು ಎಂದು ಉಡುಪಿ ಮೀನು ಮಾರಾಟಗಾರರ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಒತ್ತಾಯಿಸಿದ್ದಾರೆ.ಅವರು ಪುರಭವನದಲ್ಲಿ ನಡೆದ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘದ ೨೦೨೩-೨೦೨೪ನೇ ಸಾಲಿನ ೧೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಉಡುಪಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಿರಿಯ ಮೀನುಗಾರ ಮಹಿಳೆಯರಾದ ರುಕ್ಮಿಣಿ ಖಾರ್ವಿ ಸಾಸ್ತಾನ, ರಾಧು ಕರ್ಕೇರ ಸಾಸ್ತಾನ, ಚಿಕ್ಕಿ ಬಂಗೇರ ಬ್ರಹ್ಮಾವರ, ಜಲಜ ಕುಂದರ್ ಉಡುಪಿ, ಕಮಲ ಬಂಗೇರ ಉಡುಪಿ, ಪುಟ್ಟಿ ಸುವರ್ಣ ಕಟಪಾಡಿ, ಉಷಾ ಎನ್. ಕಾಂಚನ್ ಉಚ್ಚಿಲ, ವನಜ ಮೆಂಡನ್ ಶಿರ್ವ, ಅಪ್ಪಿ ಸಾಲ್ಯಾನ್ ಹೂಡೆ, ಬೇಬಿ ಕರ್ಕೇರ ಕಾಪು ಅವರನ್ನು ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ೫೦ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಆರೋಗ್ಯ ನೆರವನ್ನು ವಿತರಿಸಲಾಯಿತು. ಸಂಘವು ಸತತವಾಗಿ ಲಾಭಾಂಶವನ್ನು ಹೊಂದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸದಸ್ಯರಿಗೆ ಡಿವಿಡೆಂಟ್ ಘೋಷಣೆ ಮಾಡಲಾಯಿತು.ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಫೆಡರೇಶನ್ ನಿರ್ದೇಶಕ ಮಂಜುನಾಥ್ ಎಸ್.ಕೆ., ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ, ನಿರ್ದೇಶಕರಾದ ಸುರೇಶ್ ಬಿ.ಕುಂದರ್ ಮಲ್ಪೆ, ಹರೀಶ್ ಜಿ. ಕರ್ಕೇರ ಕಲ್ಮಾಡಿ, ನಾರಾಯಣ ಪಿ.ಕುಂದರ್ ಕಲ್ಮಾಡಿ, ಲಕ್ಷ್ಮೀ ಆನಂದ್ ಪಿತ್ರೋಡಿ, ಸರೋಜ ಕಾಂಚನ್ ಬ್ರಹ್ಮಾವರ, ಇಂದಿರಾ ವಿ.ಕಾಂಚನ್ ಮಲ್ಪೆ, ಭಾನುಮತಿ ವಿ.ಮೆಂಡನ್ ಕಾಪು ಉಪಸ್ಥಿತರಿದ್ದರು.ಸುನೀತ ಜೆ. ಬಂಗೇರ ಉಚ್ಚಿಲ ಸ್ವಾಗತಿಸಿದರು. ಲಹರಿ ಹರೀಶ್ ಕರ್ಕೇರ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಸುವರ್ಣ ಕಟಪಾಡಿ ವರದಿ ಮಂಡಿಸಿ, ವಂದಿಸಿದರು.