ಕನ್ನಡಪ್ರಭ ವಾರ್ತೆ ಕಲಾದಗಿಸ್ಥಳೀಯ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರತ್ಯೇಕ ಎರಡು ಕಳ್ಳತನ ಪ್ರಕರಣ ಹಾಗೂ ಕೆರೂರು ಠಾಣೆ ವ್ಯಾಪ್ತಿಯ ಜಬರಿ ಪ್ರಕರಣ ಭೇದಿಸಿ ಐವರನ್ನು ವಶಕ್ಕೆ ಪಡೆಯುವಲ್ಲಿ ಕಲಾದಗಿ ಪೊಲೀಸರು ಯಶಸ್ವಿಯಾಗಿದ್ದು, ಸಿಬ್ಬಂದಿ ಕಾರ್ಯ ತತ್ಪರತೆಗೆ ಜಿಲ್ಲಾ ಎಸ್ಪಿ ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಸ್ಥಳೀಯ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರತ್ಯೇಕ ಎರಡು ಕಳ್ಳತನ ಪ್ರಕರಣ ಹಾಗೂ ಕೆರೂರು ಠಾಣೆ ವ್ಯಾಪ್ತಿಯ ಜಬರಿ ಪ್ರಕರಣ ಭೇದಿಸಿ ಐವರನ್ನು ವಶಕ್ಕೆ ಪಡೆಯುವಲ್ಲಿ ಕಲಾದಗಿ ಪೊಲೀಸರು ಯಶಸ್ವಿಯಾಗಿದ್ದು, ಸಿಬ್ಬಂದಿ ಕಾರ್ಯ ತತ್ಪರತೆಗೆ ಜಿಲ್ಲಾ ಎಸ್ಪಿ ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ.

ಜೂನ್ 26 ರಂದು ಮಧ್ಯರಾತ್ರಿ ಸೀಮಿಕೆರಿ ಬೈಪಾಸ್ ಹತ್ತಿರದ ಮೌನೇಶ್ವರ ಜ್ಯುವೆಲ್ಲರಿ ಅಂಗಡಿಯಲ್ಲಿ ₹ 4,54,200 ಮೌಲ್ಯದ 3,228 ಗ್ರಾಂ ತೂಕದ ಬೆಳ್ಳಿ ಆಭರಣ ಕಳ್ಳತನ ಪ್ರಕರಣ ಹಾಗೂ ಜೂ.19ರಂದು ಮಧ್ಯರಾತ್ರಿ ಕಲಾದಗಿಯ ಗುರು ಬಸವ ಟ್ರೇಡರ್ಸ್ ಅಂಗಡಿಯಲ್ಲಿ ಹಾರ್ಡವೇರ್ ಹಾಗೂ ಇತರ ಒಟ್ಟು ₹ 1,21,200 ಮೌಲ್ಯದ ವಸ್ತುಗಳು ಕಳ್ಳತನವಾದ ಪ್ರಕರಣಗಳು ದಾಖಲಾಗಿದ್ದವು.

ಬಾಗಲಕೋಟೆ ಎಸ್ಪಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ.ಜಗದೀಶ್, ಡಿಎಸ್ಪಿ ಗಜಾನನ ಸುತಾರ, ಬಾಗಲಕೋಟೆ ಗ್ರಾಮೀಣ ಸಿಪಿಐ ಆರ್.ಎಸ್.ಬಿರಾದಾರ ಇವರ ಮಾರ್ಗದರ್ಶನದಲ್ಲಿ ಕಲಾದಗಿ ಠಾಣಾ ಪಿಎಸೈ ಪ್ರವೀಣ ಬೀಳಗಿ ಮತ್ತು ಸಿಬ್ಬಂದಿ ಸಿ.ವೈ.ಭಜಂತ್ರಿ, ಗದ್ದೆಪ್ಪ ಎಂ., ಎಸ್.ಕೆ.ಕುರಿ, ಸಿ.ಎಸ್.ತಳವಾರ, ಪ್ರದೀಪ್ ಪಾಟೀಲ, ಎಂ.ಬಿ.ಬಳಬಟ್ಟಿ, ಎಸ್.ಕೆ.ಕಪಲಿ, ಬಿ.ಆರ್.ಮುರನಾಳ, ಬಿ.ಸಿ.ರಾಠೋಡ, ಹಾಗೂ ಜಿಲ್ಲಾಗಣಕ ಯಂತ್ರ ವಿಭಾಗದ ಬಸವರಾಜ ಜಗಲಿ ಕೂಡಿಕೊಂಡು ಕಳ್ಳತನ ಮಾಡಿದ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆಗೆ ಬಲೆ ಬೀಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರಾದ ಬಾಗಲಕೋಟೆ ವಾಂಬೆ ಕಾಲೋನಿಯ ಚಾಂದಬಾಷಾ ಕಾಶೀಮಸಾಬ ಚಿತ್ತಾಪೂರ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಮಾರುತಿ ಯಲ್ಲಪ್ಪ ವಡ್ಡರ, ಕಲಾದಗಿ ಗ್ರಾಮದ ಮಹಮ್ಮದ್ ಕೈಫ್, ರಾಜೇಸಾಬ ಕಲಾದಗಿ, ರಿಯಾಜಹಮ್ಮದ್ ರಾಜೇಸಾಬ ಮಕಾನದಾರ, ಮುಧೋಳ ತಾಲೂಕಿನ ಬದನೂರ ಗ್ರಾಮದ ಹನಮಂತ ವಿಠ್ಠಲ ಹರಿಜನ ಅವರನ್ನು ಬಂಧಿಸಿದ್ದಾರೆ.

ಸದರಿ ಆರೋಪಿತರಿಂದ 2,500 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್‌ ಹಾರ್ಡವೇರ್‌ ಸಾಮನುಗಳು ಜಬರಿ ಕಳ್ಳತನಕ್ಕೆ ಸಂಬಂಧಿಸಿದ 1 ಮೊಬೈಲ್ ಒಟ್ಟು ₹ 7,80,000 ಮೌಲ್ಯದ ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿಲ್ಲಾ ಎಸ್ಪಿ ಸಿದ್ಧಾರ್ಥ ಗೋಯಲ್ ಕಲಾದಗಿ ಪೊಲೀಸರು ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿಸಿದ್ದಾರೆ.