ಐವರು ಬೈಕ್ ಕಳ್ಳರ ಬಂಧನ

| Published : Nov 27 2023, 01:15 AM IST

ಸಾರಾಂಶ

ರಾಮನಗರ: ಬೆಂಗಳೂರು, ಮೈಸೂರು ಹಾಗೂ ಬಿಡದಿ ಸುತ್ತಮುತ್ತಲ ಭಾಗದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕ್ಯಾಂಟರ್ ವಾಹನವನ್ನು ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ರಾಮನಗರ: ಬೆಂಗಳೂರು, ಮೈಸೂರು ಹಾಗೂ ಬಿಡದಿ ಸುತ್ತಮುತ್ತಲ ಭಾಗದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕ್ಯಾಂಟರ್ ವಾಹನವನ್ನು ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ಜಿಶಾನ್ ಪಾಷ, ಮುದಾಸಿರ್, ಮುಬಾರಕ್, ಅನಿಲ್ ಅಲಿಯಾಸ್ ಚಿಕ್ಕಮಸಾಲೆ, ಬಾಬು ಅಲಿಯಾಸ್ ದಸ್ತಗೀರ್ ಬಂಧಿತರು. ಇವರೆಲ್ಲರು ಬಿಡದಿ ನಿವಾಸಿಗಳಾಗಿದ್ದಾರೆ. ಬಿಡದಿಯ ಅವರಗೆರೆ ಕ್ರಾಸ್ ಬಳಿ ಗುರುವಾರ ಸಂಜೆ 6 ಗಂಟೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬಿಡದಿ-ಬೆಂಗಳೂರು ಮತ್ತು ಮೈಸೂರು ಕಡೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಕ್ಯಾಂಟರ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಡಿವೈಎಸ್‌ಪಿ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಿಇಐ ಶಂಕರ್‌ನಾಯಕ್ ಮತ್ತು ಬಿಡದಿ ಪಿಎಸ್‌ಐ ನರಸಿಂಹಮೂರ್ತಿ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಮೇಲೆ ಬಿಡದಿಯಲ್ಲಿ 5 ಪ್ರಕರಣ, ಬೆಂಗಳೂರಿನಲ್ಲಿ 2 ಹಾಗೂ ಮೈಸೂರಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಸುಮಾರು 7.63 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಕ್ಯಾಂಟರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದು ಎಲ್ಲಾ 5 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

26ಕೆಆರ್ ಎಂಎನ್ 13.ಜೆಪಿಜಿ

ಬಿಡದಿ ಮತ್ತಿತರ ಭಾಗದಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿ ಹಾಜರು ಪಡಿಸಿದರು.