ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಎಂಎಎಂಐಟಿ) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಿಗಾಗಿ ‘ಸಿಸ್ಟಮ್ಸ್ ಎಂಜಿನಿಯರಿಂಗ್ – ಆರ್ಕಿಟೆಕ್ಚರ್, ಮಾಡೆಲಿಂಗ್, ಸಿಮ್ಯುಲೇಶನ್ ಮತ್ತು ವ್ಯಾಲಿಡೇಶನ್’ ವಿಷಯದ ಕುರಿತು ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಯಶಸ್ವಿಯಾಗಿ ನಡೆಯಿತು.
ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಎಂಎಎಂಐಟಿ) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಿಗಾಗಿ ‘ಸಿಸ್ಟಮ್ಸ್ ಎಂಜಿನಿಯರಿಂಗ್ – ಆರ್ಕಿಟೆಕ್ಚರ್, ಮಾಡೆಲಿಂಗ್, ಸಿಮ್ಯುಲೇಶನ್ ಮತ್ತು ವ್ಯಾಲಿಡೇಶನ್’ ವಿಷಯದ ಕುರಿತು ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಯಶಸ್ವಿಯಾಗಿ ನಡೆಯಿತು.
ಜು. 27ರಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 50 ಮಂದಿ ಅಧ್ಯಾಪಕರು ಭಾಗವಹಿಸಿ, ಆಧುನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳು ಹಾಗೂ ಸಿಸ್ಟಮ್ಸ್ ಎಂಜಿನಿಯರಿಂಗ್‌ನ ವಿವಿಧ ಆಯಾಮಗಳ ಕುರಿತು ತರಬೇತಿ ಪಡೆದರು.ಸಂಪನ್ಮೂಲ ವ್ಯಕ್ತಿಗಳಾಗಿ ಮ್ಯಾಥ್ವರ್ಕ್ಸ್, ಬೆಂಗಳೂರಿನ ಕನ್ಸಲ್ಟಿಂಗ್ ಅಪ್ಲಿಕೇಶನ್ ಎಂಜಿನಿಯರ್ ಡಾ. ಗೌರವ್ ದುಬೆ, ಹಿರಿಯ ಎಂಜಿನಿಯರ್ ಡಾ. ದೇಬಾನಂದ್ ಸಿಂಗ್ದೇವ್ ಹಾಗೂ ಕೋರ್-ಎಲ್ ಟೆಕ್ನಾಲಜೀಸ್, ಬೆಂಗಳೂರಿನ ಅಪ್ಲಿಕೇಶನ್ ಮ್ಯಾನೇಜರ್ ಡಾ. ರಿಯಾಜ್ ಎ. ರಹಿಮನ್ ಭಾಗವಹಿಸಿ ಉಪನ್ಯಾಸ ನೀಡಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಇನ್‌ಚಾರ್ಜ್ ಮುಖ್ಯಸ್ಥ ಡಾ. ನರಸಿಂಹ ಮರಕಲಾ ಸ್ವಾಗತಿಸಿ, ಎಫ್‌ಡಿಪಿಯ ಉದ್ದೇಶಗಳನ್ನು ವಿವರಿಸಿದರು. ಡಾ. ಅನಂತಕೃಷ್ಣ ಸೋಮಯಾಜಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಗೌರವ್ ದುಬೆ ಮಾತನಾಡಿ, ಆಧುನಿಕ ಎಂಜಿನಿಯರಿಂಗ್ ಹಾಗೂ ಸಂಶೋಧನೆಯಲ್ಲಿ ಸಿಸ್ಟಮ್ಸ್ ಎಂಜಿನಿಯರಿಂಗ್ ಪರಿಕಲ್ಪನೆಗಳು ಮತ್ತು ಮ್ಯಾಟ್ಲ್ಯಾಬ್–ಸಿಮುಲಿಂಕ್ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಡಿಯು ಆಫ್-ಕ್ಯಾಂಪಸ್ ಸೆಂಟರ್‌ನ ಸಿಒಇ ಡಾ. ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ನಿತಿನ್ ಕುಮಾರ್ ವಂದಿಸಿದರು. ಡಾ. ಕುಮಾರ್ ಎಚ್.ಎಸ್ ಕಾರ್ಯಕ್ರಮ ನಿರೂಪಿಸಿದರು.