ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಸರಿಪಡಿಸಿ

| Published : Jul 04 2024, 01:04 AM IST

ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಸರಿಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂಬ ಸಾಕಷ್ಟು ದೂರುಗಳಿವೆ. ಅಧಿಕಾರಿಗಳು ಉಸ್ತುವಾರಿ ಮಾಡಿ ಸರಿಪಡಿಸಬೇಕು ಹಾಗೂ ಅಡುಗೆಯವರು ಆಹಾರ ಸಾಮಗ್ರಿ ಮನೆಗೆ ತೆಗೆದುಕೊಂಡು ಹೋಗುತ್ತಾರೆಂದು ವಿದ್ಯಾರ್ಥಿಗಳ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯಸಚೇತಕ, ಶಾಸಕ ಅಶೋಕ ಪಟ್ಟಣ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂಬ ಸಾಕಷ್ಟು ದೂರುಗಳಿವೆ. ಅಧಿಕಾರಿಗಳು ಉಸ್ತುವಾರಿ ಮಾಡಿ ಸರಿಪಡಿಸಬೇಕು ಹಾಗೂ ಅಡುಗೆಯವರು ಆಹಾರ ಸಾಮಗ್ರಿ ಮನೆಗೆ ತೆಗೆದುಕೊಂಡು ಹೋಗುತ್ತಾರೆಂದು ವಿದ್ಯಾರ್ಥಿಗಳ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯಸಚೇತಕ, ಶಾಸಕ ಅಶೋಕ ಪಟ್ಟಣ ಸೂಚಿಸಿದರು.ತಾಲೂಕು ಪಂಚಾಯತಿ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಇಲಾಖೆಯ ಮಾಹಿತಿ ಸಭೆಗೆ ತಿಳಿಸುತ್ತಿದ್ದಂತೆ ಶಾಸಕ ಅಶೋಕ ಪಟ್ಟಣ ಸ್ವತಃ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆಹಾರ ಗುಣಮಟ್ಟ ನೋಡಿದ್ದೇನೆ ಎಂದು ಹೇಳಿದಾಗ ಇಲಾಖೆಯ ಅಧಿಕಾರಿ ಅಡುಗೆಯವರ ಮತ್ತು ವಿದ್ಯಾರ್ಥಿಗಳ ಸಭೆ ಮಾಡಿ ಯಾವುದೇ ಸಮಸ್ಯೆಯಾಗದಂತೆ ಸೂಚಿಸಿದ್ದಾಗಿ ತಿಳಿಸಿದರು.ಆಹಾರ ವಿಇತರಣೆಯಲ್ಲಿ ಯಾವುದೇ ಲೋಪವಾಗಬಾರದು ವಸತಿ ನಿಲಯಗಳಲ್ಲಿ ಬಡವರ ಮಕ್ಕಳು ವಿದ್ಯಾರ್ಜನೆಗೆ ಬಂದಿರುತ್ತಾರೆ. ಅವರಿಗೆ ಗುಣ ಮಟ್ಟದ ಆಹಾರ ನೀಡಬೇಕು. ಯಾವುದೇ ದೂರು ಬರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಹಗಳಿಗೆ ಸೂಚನೆ ನೀಡಿದರು.ಪುರಸಭೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಪಟ್ಟಣದ ಸೌಂದರ್ಯಕರಣಕ್ಕೆ ಮುಖ್ಯರಸ್ತೆಯ ರಸ್ತೆ ವಿಭಜಕ್ಕೆ ಹಾಕಿರುವ ಬೀದಿದೀಪಗಳು ಕಳೆದ 5 ವರ್ಷದಿಂದ ಸರಿಯಾಗಿ ಬೆಳಗುತ್ತಿಲ್ಲ. ಪರಿಣಾಮ ಕತ್ತಲೆಯಲ್ಲಿ ಜನ ಸಂಚರಿಸಬೇಕಾಗಿದೆ. ಏಕೆ ವಿಳಂಬ ಎಂದು ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಅವರಿಗೆ ಪ್ರಶ್ನಿಸಿದಾಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ಕೆಲಸ ಪ್ರಾರಂಭಿಸುತ್ತೇವೆ ಎಂದರು ಮತ್ತು ಪಟ್ಟಣದ ಸುತ್ತಲಿನ ಪ್ರದೇಶದಲ್ಲಿ ಮಟನ್ ಮತ್ತು ಚಿಕನ್ ಅಂಗಡಿಯವರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದು, ಅದನ್ನು ತಡೆಗಟ್ಟಲು ಹೆಚ್ಚಿನ ಪ್ರಮಾಣದ ದಂಡ ವಿಧಿಸಬೇಕು ಎಂದು ತಿಳಿಸಿದರು.ತಾಲೂಕಿನ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಪ್ರತಿ ಪಂಚಾಯತಿಯಲ್ಲಿ ಕುಡಿಯುವ ನೀರಿನ ಜಲಮೂಲಗಳ ಪರೀಕ್ಷೆಗೆ ಕಿಟ್‌ನ್ನು ನೀಡಿದ್ದು ಎಲ್ಲ ಜಲಮೂಲಗಳು ಕುಡಿಯಲು ಯೋಗ್ಯವಾಗಿವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ವಿಶ್ವಕರ್ಮ ಸಭೆಯಲ್ಲಿ ಭೀಕರ ಬರಗಾಲದಲ್ಲಿ ತಾಲೂಕಿನ ಯಾವಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಖಾಸಗಿಯವರ ಸಹಭಾಗಿತ್ವದಲ್ಲಿ ನೀರು ಪೂರೈಕೆ ಮಾಡಲಾಗಿದೆ. ನಾಲ್ಕು ಗ್ರಾಮಗಳಲ್ಲಿ ಮಾತ್ರ ಇನ್ನೂ ಖಾಸಗಿ ವ್ಯಕ್ತಿಗಳಿಂದ ನೀರು ಪೂರೈಕೆಯಾಗಿತ್ತಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ನಾಗರಾಜ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಇದ್ದರು.

2 ಗಂಟೆ ತಡವಾಗಿ ಆರಂಭವಾದ ಸಭೆ

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ತಾಲೂಕು ಪಂಚಾಯತಿ ಸಾಮಾನ್ಯಸಭೆ ಹಾಗೂ ಕೆಡಿಪಿ ಸಭೆ ಸುಮಾರು 2 ಗಂಟೆ ತಡವಾಗಿ ಆರಂಭವಾಯಿತು. ಶಾಸಕ ಅಶೋಕ ಪಟ್ಟಣ ಅವರು 2.15 ನಿಮಿಷ ತಡವಾಗಿ ಆಗಮಸಿದರು. 11 ಗಂಟೆಗೆ ಆಗಮಿಸಿದ್ದ ಅಧಕಾರಿಗಳು ಮತ್ತು ಮಾಧ್ಯಮದವರು ಕಾಯ್ದು ಸುಸ್ತಾದರು.