ಸಾರಾಂಶ
ಧ್ವಜ ಹಾರಾಟ ಮಾಡಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮೌಖಿಕ ದೂರು ನೀಡಿದ್ದಾರೆ ಮತ್ತು ರಸ್ತೆಯಲ್ಲಿ ಧ್ವಜಸ್ಥಂಭ ನಿರ್ಮಿಸಿ, ಹಸಿರು ಧ್ವಜ ಹಾರಾಟದ ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ; ಸಾರ್ವಜನಿಕ ರಸ್ತೆಯ ಮನೆಯ ಮುಂಭಾಗದಲ್ಲಿ ಧ್ವಜ ಸ್ಥಂಭ ನಿರ್ಮಿಸಿ ಹಸಿರು ಭಾವುಟ ಹಾರಾಟ ನಡೆಸಿರುವ ಘಟನೆ ನಗರದಲ್ಲಿ ವರದಿಯಾಗಿದೆ. ನಗರದ 27ನೇ ವಾರ್ಡಿನ ಭಜನೆ ಮನೆ ರಸ್ತೆಯ ಹಿಂಭಾಗದ ರಸ್ತೆಯಲ್ಲಿ ಮನೆಯ ಮಾಲೀಕರಿಂದ ರಸ್ತೆಯಲ್ಲಿ ಧ್ವಜಸ್ಥಂಭ ನಿರ್ಮಿಸಿ ಹಸಿರು ಧ್ವಜ ಹಾರಾಟ ಮಾಡಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮೌಖಿಕ ದೂರು ನೀಡಿದ್ದಾರೆ ಮತ್ತು ರಸ್ತೆಯಲ್ಲಿ ಧ್ವಜಸ್ಥಂಭ ನಿರ್ಮಿಸಿ, ಹಸಿರು ಧ್ವಜ ಹಾರಾಟದ ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ನಗರ ಪೋಲಿಸ್ ಠಾಣೆಯ ಪಿಎಸ್ಐ ಎಚ್.ನಂಜುಂಡಯ್ಯ ಮತ್ತು ನಗರಸಭೆ ಪೌರಾಯುಕ್ತ ಮಂಜುನಾಥ್ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿ, ರಸ್ತೆಯಲ್ಲಿ ಧ್ವಜಸ್ಥಂಭ ನಿರ್ಮಿಸಿ, ಹಸಿರು ಧ್ವಜ ಹಾರಿಸಿದ್ದ ಮನೆಯ ಮಾಲೀಕನಿಗೆ ತೆರವುಗೊಳಿಸುವಂತೆ ತಾಕೀತು ಮಾಡಿದ್ದಾರೆ. ಪಿಎಸ್ಐ ಮತ್ತು ಪೌರಾಯುಕ್ತರ ಎಚ್ಚರಿಕೆಗೆ ಮಣಿದ ಮನೆಯ ಮಾಲೀಕ ತೆರವುಗೊಳಿಸುವ ಭರವಸೆ ನೀಡಿದ್ದಾನೆ.