ದೋಷರಹಿತ ಕಾಗುಣಿತ, ಸ್ಪಷ್ಟೋಚ್ಛಾರಣೆ ಕನ್ನಡಿಗರಲ್ಲಿ ಕುಂದುತ್ತಿದೆ: ಹಿರಿಯ ಸಾಹಿತಿ ಭಾರತಿ ವಸ್ತ್ರದ ಕಳವಳ

| Published : Nov 18 2024, 12:01 AM IST

ದೋಷರಹಿತ ಕಾಗುಣಿತ, ಸ್ಪಷ್ಟೋಚ್ಛಾರಣೆ ಕನ್ನಡಿಗರಲ್ಲಿ ಕುಂದುತ್ತಿದೆ: ಹಿರಿಯ ಸಾಹಿತಿ ಭಾರತಿ ವಸ್ತ್ರದ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಗತಿ ಸಂಘದಿಂದ 69ನೇ ಕರ್ನಾಟಕ ರಾಜೋತ್ಸವ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ, ಬೀದರ್‌

ಮಾತೃಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಕಾಗುಣಿತದ ಎಚ್ಚರ ಮತ್ತು ಸ್ಪಷ್ಟ ಉಚ್ಛಾರಣೆ ಅತ್ಯಗತ್ಯವಾಗಿದೆ ಇತ್ತೀಚಿನ ದಿನಗಳಲ್ಲಿ ಅದು ಕುಂದುತ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಹಿರಿಯ ಸಾಹಿತಿ ಭಾರತಿ ವಸ್ತ್ರದ ಕಳವಳ ವ್ಯಕ್ತಪಡಿಸಿದರು. ಅವರು ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಗತಿ ಸಂಘದಿಂದ 69ನೇ ಕರ್ನಾಟಕ ರಾಜೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಸರಿಯಾದ ರೀತಿಯಲ್ಲಿ ಅರಿತು ಮಾತನಾಡುವದರಲ್ಲಿ ಹೆಮ್ಮೆಯಷ್ಟೇ ಅಲ್ಲ ಬರವಣಿಗೆಯಲ್ಲಿ ದೋಷವಾಗದಂತೆ ಇರಬೇಕು ಅದಕ್ಕಾಗಿ ಕನ್ನಡ ಭಾಷೆಯ ಮೇಲಿನ ಹಿಡಿತಕ್ಕಾಗಿ ಹೆಚ್ಚಿನ ಮತ್ತು ತದೇಕಚಿತ್ತದಿಂದ ಅಭ್ಯಾಸ ಮಾಡಬೇಕು ಎಂದರು.ಕನ್ನಡದಲ್ಲಿ ಬರೆಯುವದಿರಲಿ ಕನ್ನಡ ಭಾಷೆಯಲ್ಲಿ ಮಾತನಾಡುವಾಗಲೂ ಸಾಕಷ್ಟು ತಪ್ಪುಗಳಾಗುತ್ತಿವೆ. ಅದರಲ್ಲಿಯೂ ನಮ್ಮ ಬೀದರ್‌ ನೆಲದ ಜನರಿಂದ. ಅಪ್ಪಟ ಕನ್ನಡಿಗರಾದ ನಾವು ಇತ್ತ ಎಚ್ಚರವಹಿಸಬೇಕು. ನಮ್ಮ ಕನ್ನಡವನ್ನು ಸ್ವಚ್ಛ ಹಾಗೂ ಸ್ಪಷ್ಟವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು ಎಂದರು.ಬಿವಿಬಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶಿವಲೀಲಾ ಮಠಪತಿ ಅವರು ರಾಜ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ಮಂಡಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, ಮಾಜಿ ರಾಷ್ಟ್ರಪತಿ ಎಪಿಜಿ ಅಬ್ದುಲ್‌ ಕಲಾಂ ಅವರು ಹೇಳುವಂತೆ ಜೀವನದಲ್ಲಿ ಗುರಿಯಿರಬೇಕು ಎಂದರು.ಕನ್ನಡ ಪ್ರಗತಿ ಸಂಘದ ಅಧ್ಯಕ್ಷರಾದ ಉಮಾಕಾಂತ ಮೀಸೆ ಪ್ರಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜೋತ್ಸವ ಸಮಾರಂಭಗಳಂತಹ ಚಿಂತನೆಗೆ ನೂಕುವ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವದರಿಂದ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಚಾರಗಳು ಪರಿಚಯವಾಗುತ್ತವೆ ಎಂದರು.ಇದೇ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಘದ ಸಂಸ್ಥಾಪನಾ ಅಧ್ಯಕ್ಷ ಡಾ. ರಮೇಶ ಮೂಲಗೆ, ಕಾಲೇಜಿನ ಪ್ರಾಚಾರ್ಯ ಡಾ. ಎಸ್‌ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಏಕನಾಥ, ಸುಲೋಚನಾ ಬಿರಾದಾರ, ನಸಿರೋದ್ದಿನ್‌ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.