ಸಾರಾಂಶ
- ಕುಂದೂರಿನಲ್ಲಿ ತೋಟಗಾರಿಕ ಬೆಳೆಗಳ ಮಾಹಿತಿ ಕಾರ್ಯಾಗಾರ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅಡಕೆ ಬೆಳೆ ವಿಸ್ತೀರ್ಣ ಎರಡು ಪಟ್ಟು ಹೆಚ್ವಾಗಿದೆ. ಹಾಗಾಗಿ ರೈತರು ಒಂದೇ ಬೆಳೆ ಮೇಲೆ ಅವಲಂಬಿತರಾಗದೇ, ಸೂಕ್ತವಾದ ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಜಿ.ಕೆ. ಗಿರಿಜೇಶ್ ಹೇಳಿದರು.ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮುದಾಯ ಭವನದಲ್ಲಿ ಬುಧವಾರ ಕತ್ತಲಗೆರೆ ವಿಸ್ತರಣಾ ಶಿಕ್ಷಣ ಘಟಕ, ಕ್ಯಾಲಿಕಟ್‌ನ ಅಡಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಕುಂದೂರು ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಆಶ್ರಯದಲ್ಲಿ ತೋಟಗಾರಿಕ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತರು ಆರಂಭದ ಅಡಕೆ ತೋಟದಲ್ಲಿ ಜೋಳ, ಟೊಮೆಟೋ, ಅಲಸಂದೆ, ಹುರುಳಿ, ಸೋಯಾಬಿನ್, ಬೆಂಡೆ, ಸೇವಂತಿ, ಮಲ್ಲಿಗೆ, ಸುಗಂಧರಾಜ ಪುಷ್ಪಗಳನ್ನು ಬೆಳೆಯಬಹುದು. 5ರಿಂದ 7 ವರ್ಷಗಳ ನಂತರ ಅಡಕೆ ತೋಟಗಳಲ್ಲಿ ವೀಳ್ಯದೆಲೆ, ಕಾಳುಮೆಣಸು, ಕೊಕೋ, ಕಾಫಿ, ಏಲಕ್ಕಿ ಹೀಗೆ ಸೂಕ್ತ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಹೆಚ್ಚಿನ ಆದಾಯ ಪಡೆಯಬಹುದು. ಮನೆಗೆ ಬೇಕಾದ ಗುಣಮಟ್ಟದ ಆಹಾರ ಉತ್ಪಾದನೆಯೂ ಮಾಡಬಹುದು ಎಂದರು.ತರಳುಬಾಳು ಕೃಷಿ ವಿಜ್ಞಾನ ಕೇಂದ್ರದ ಡಾ. ಬಸವನಗೌಡ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ಅಡಕೆ ತೋಟದ ವೈಜ್ಞಾನಿಕ ನಿರ್ವಹಣಾ ಕಾರ್ಯಕ್ರಮಗಳು ವಿಷಯ ಮಂಡಿಸಿದರು. ಅಡಕೆ ಬೆಳೆಗೆ ಬೇಕಾದ ಪೋಷಕಾಂಶಗಳು ಮಣ್ಣು ಮತ್ತು ನೀರಿನ ಮೂಲಕ ದೊರೆಯುತ್ತವೆ. ಹಾಗಾಗಿ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ, ಅದರ ಅನುಸಾರವಾಗಿ ಸಮತೋಲಿತ ಗೊಬ್ಬರ ಪೋಷಕಾಂಶಗಳನ್ನು ಕೊಡಬೇಕು ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಬೇಸಾಯ ಶಾಸ್ಚ್ರ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಕೆ. ವೀರಣ್ಣ ಮಾತನಾಡಿ, ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಮತ್ತು ಸೈನಿಕ ಹುಳು ನಿಯಂತ್ರಣ ಬಹಳ ಪ್ರಮುಖವಾಗಿದೆ. ನಮ್ಮ ವಿಶ್ವವಿದ್ಯಾಲಯ ತಂತ್ರಜ್ಞಾನಗಳ ಬಳಕೆ ಮಾಡುವಂತೆ ತಿಳಿಸಿದರು.ಕತ್ತಲಗೆರೆ ಕೃಷಿ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಂ. ಆನಂದ ಕುಮಾರ್ ಮಾತನಾಡಿ, ಈ ಭಾಗದ ರೈತರು ಸಮಗ್ರ ಹಾಗೂ ಲಾಭದಾಯಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮಾಹಿತಿ ನೀಡಿದರು.
ಕಾಳು ಮೆಣಸು ತಜ್ಞ ಡಾ. ಎಚ್.ಪಿ.ಸುದೀಪ್ ಬಿಸಾಟಿ, ಕತ್ತಲಗೆರೆ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾಧಿಕಾರಿ ಡಾ. ಗಂಗಪ್ಪಗೌಡ ಬಿರಾದಾರ ಮಾತನಾದರು.ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಬಿ.ಎಂ. ಲತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಎಚ್.ಕೆ. ವೀರಣ್ಣ, ಡಾ. ಬಿ.ಎಂ. ಆನಂದ ಕುಮಾರ್ ಆಯೋಜಕರಾಗಿ ಡಾ. ಗಂಗಪ್ಪಗೌಡ ಬಿರಾದಾರ, ಡಾ. ಮಾಲತೇಶ ಕೃಷಿ ಅಧಿಕಾರಿ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಬಸವನಗೌಡ ಎಂ.ಬಿ., ಡಾ.ಸುದೀಪ, ಡಾ. ಶರಣಪ್ಪ ಕುರಿ, ಡಾ.ರೇಖಾ ತೋಟಗಾರಿಕೆ ಇಲಾಖೆ, ಡಾ. ನಿರಂಜನ್ ಕುಮಾರ್, ಡಾ. ಶರಣಪ್ಪ, ಗ್ರಾಮ ಪಂಚಾಯಿತಿಯ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರು, ಸಧಸ್ಯರು ಹಾಗೂ ಕುಂದೂರು, ಕೂಲಂಬಿ ಯಕ್ಕನಹಳ್ಳಿ, ಸಿಂಗಟಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದ 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
- - --6ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ತೋಟಗಾರಿಕಾ ಬೆಳೆಗಳ ಮಾಹಿತಿ ಕಾಯಾಗಾರ ನಡೆಯಿತು.