ಸಾರಾಂಶ
ರೈತರು ಬೀಜೋತ್ಪಾದನೆಯಲ್ಲಿ ಲಾಭ ಗಳಿಸುವ ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಲ್ಲದೆ ಸಮಾಜದಲ್ಲಿ ಅನೇಕ ಸಾಧಕರು ತಮ್ಮದೇ ಕೊಡುಗೆ ನೀಡಿದ್ದು, ಅಂಥವರ ಸಾಲಿನಲ್ಲಿ ಅವರ ಮಕ್ಕಳು ಹೆಸರು ಮಾಡಬೇಕು.
ಯಲಬುರ್ಗಾ:
ರೈತ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಎಕ್ಸನ್ ಕಂಪನಿ ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದೆ ಎಂದು ಅಗ್ರಿ ಸೈನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೆಂತಿಲ್‌ನಾಥನ್ ಹೇಳಿದರು.ತಾಲೂಕಿನ ಹಿರೇಅರಳಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಲ್ಲಿ ಎಕ್ಸನ್ ಅಗ್ರಿ ಸೈನ್ಸ್ ವತಿಯಿಂದ ನಿರ್ಮಿಸಿದ ಅನ್ನಪೂರ್ಣೇಶ್ವರಿ ಭೋಜನಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಶಾಲೆಗಳಿಗೆ ಸೌಲಭ್ಯ ಒದಗಿಸುವ ಮೂಲಕ ಶ್ರೇಷ್ಠ ಕಾರ್ಯ ಮಾಡಲಾಗುತ್ತಿದೆ ಎಂದರು.
ರೈತರು ಬೀಜೋತ್ಪಾದನೆಯಲ್ಲಿ ಲಾಭ ಗಳಿಸುವ ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಲ್ಲದೆ ಸಮಾಜದಲ್ಲಿ ಅನೇಕ ಸಾಧಕರು ತಮ್ಮದೇ ಕೊಡುಗೆ ನೀಡಿದ್ದು, ಅಂಥವರ ಸಾಲಿನಲ್ಲಿ ಅವರ ಮಕ್ಕಳು ಹೆಸರು ಮಾಡಬೇಕು. ದೇಶಕ್ಕೆ ಸೇವೆ ಮಾಡುವಂತಹವರು ಗ್ರಾಮೀಣ ಪ್ರದೇಶದಿಂದ ಹೆಚ್ಚೆಚ್ಚು ಬರಬೇಕು ಎಂದರು.ಮುಖ್ಯಶಿಕ್ಷಕ ಕಲ್ಲಯ್ಯ ಕೋಚಲಾಪುರಮಠ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಕುಳಿತು ಬಿಸಿಯೂಟ ಸವಿಯಲು ಭೋಜನಾಲಯ ಸಹಕಾರಿಯಾಗಿದೆ. ಇದೊಂದು ಕಂಪನಿಯ ಮಹತ್ಕಾರ್ಯವಾಗಿದೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಲಾ ಮೈದಾನದಲ್ಲಿ ಸಸಿ ನೆಡಲಾಯಿತು.
ಈ ವೇಳೆ ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್, ಕಂಪನಿಯ ಸಿಬ್ಬಂದಿ ಅನಿಲ್ ಮಲ್ಲಪ್ಪ, ಎಂ. ಆನಂದಗೌಡ, ಅಜಯಕುಮಾರ ದೀಕ್ಷಿತ್, ಸಂದೀಪ ಬಿರಾದಾರ, ಚೇತನ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹನುಮಂತಪ್ಪ ವಾದಿ, ಉಪಾಧ್ಯಕ್ಷೆ ಲಕ್ಷ್ಮೀದೇವಿ ಮನ್ನಾಪುರ, ಬಿಇಒ ಅಶೋಕ ಗೌಡರ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ. ದಾನಿ, ಪ್ರಮುಖರಾದ ಶ್ರೀಶೈಲ ವಾದಿ, ಸಂಗಪ್ಪ ತೋಟದ, ಶರಣಪ್ಪ ವಾದಿ, ಬಸಪ್ಪ ಹಕಾರಿ, ದುರಗಪ್ಪ ತುಮ್ಮರಗುದ್ದಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.