ಕನ್ನಡಪ್ರಭ ವಾರ್ತೆ ಖಾನಾಪುರ ಪಶು ಸಂಗೋಪನೆ ಇಲಾಖೆಯ ತಾಲೂಕು ಕಚೇರಿಯಿಂದ ತಾಲೂಕಿನ ವಿವಿಧ ಭಾಗಗಳ ಹೈನುಗಾರಿಕೆ ಕೈಗೊಂಡಿರುವ ರೈತರಿಗೆ ಇಲಾಖೆಯ ಸಹಾಯಧನದಲ್ಲಿ ಒಟ್ಟು 20 ರಾಸುಗಳಿಗಾಗಿ ಮೇವು ಕತ್ತರಿಸುವ ಯಂತ್ರ ಮತ್ತು 27 ಹಸುಗಳು ನಿಲ್ಲುವ ಜಾಗದಲ್ಲಿ ನೆಲಕ್ಕೆ ಹಾಸುವ ರಬ್ಬರ್ ಮ್ಯಾಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್ ಪಡೆದ ಫಲಾನುಭವಿಗಳು ಇವುಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಶು ಸಂಗೋಪನೆ ಇಲಾಖೆಯ ತಾಲೂಕು ಕಚೇರಿಯಿಂದ ತಾಲೂಕಿನ ವಿವಿಧ ಭಾಗಗಳ ಹೈನುಗಾರಿಕೆ ಕೈಗೊಂಡಿರುವ ರೈತರಿಗೆ ಇಲಾಖೆಯ ಸಹಾಯಧನದಲ್ಲಿ ಒಟ್ಟು 20 ರಾಸುಗಳಿಗಾಗಿ ಮೇವು ಕತ್ತರಿಸುವ ಯಂತ್ರ ಮತ್ತು 27 ಹಸುಗಳು ನಿಲ್ಲುವ ಜಾಗದಲ್ಲಿ ನೆಲಕ್ಕೆ ಹಾಸುವ ರಬ್ಬರ್ ಮ್ಯಾಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್ ಪಡೆದ ಫಲಾನುಭವಿಗಳು ಇವುಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಕರೆ ನೀಡಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯ್ದ ರೈತ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್ ವಿತರಿಸಿ ಮಾತನಾಡಿದ ಅವರು, ತಾಲೂಕಿನ ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಬಹಳಷ್ಟಿದೆ. ಇದ್ದ ಸಿಬ್ಬಂದಿಯ ಪೈಕಿ ಮೂವರನ್ನು ತಾಲೂಕಿನಿಂದ ಹೊರಗೆ ನಿಯೋಜನೆ ಮಾಡಲಾಗಿದೆ. ಆದರೂ ಸಧ್ಯ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಾಧಿಕಾರಿಗಳು ಲಭ್ಯವಿರುವ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಜಾನುವಾರುಗಳಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ತಾಲೂಕಿನ ಸಿಬ್ಬಂದಿ ಕೊರತೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿ ಕೊಡುವಂತೆ ಇಲಾಖೆ ಮಂತ್ರಿಗಳ ಮೂಲಕ ಮುಖ್ಯಸ್ಥರ ಮೇಲೆ ಒತ್ತಡ ಹೇರಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಮನೋಹರ ದಾದ್ಮಿ, ವೈದ್ಯಾಧಿಕಾರಿಗಳಾದ ಡಾ.ಉಮೇಶ ಹೊಸೂರ, ಡಾ.ಗಂಗಾಧರ ಬಾಳಗಟ್ಟಿ ಸೇರಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ರೈತರು, ಫಲಾನುಭವಿಗಳು ಇದ್ದರು.