ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆ-ಡಾ. ರಾಮು ಮೂಲಗಿ

| Published : Aug 25 2024, 01:46 AM IST

ಸಾರಾಂಶ

ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಮು ಮೂಲಗಿ ಹೇಳಿದರು.

ಸವಣೂರು: ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಮು ಮೂಲಗಿ ಹೇಳಿದರು.ತಾಲೂಕಿನ ಜೇಕಿನಕಟ್ಟಿ ಗ್ರಾಮದ ಶ್ರೀ ಮಲ್ಲನಗೌಡ ಮುಂದಿನಮನಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಧಾರವಾಡ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಮಾನವನ ನಾಗರಿಕತೆ ಜೀವನಕ್ಕಿಂತಲೂ ಮುಂಚಿತವಾಗಿ ಶ್ರಮ ಶಕ್ತಿ ಮುಖ್ಯವಾಗಿದೆ. ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು ಕುಣಿತ ಹಾಗೂ ವಾದ್ಯ ಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ. ಜನಪದ ಕಲೆ ಯಾವ ಕಾಲಘಟ್ಟದಲ್ಲಿಯೂ ನಾಶವಾಗದೇ ಮುಂದುವರೆಯುತ್ತಿದ್ದು, ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ದರಾಗಬೇಕು ಎಂದರು.ನಿವೃಯ್ಯ ಪ್ರಾಚಾರ್ಯ ಗದಿಗೆಯ್ಯ ಪ್ರಭಯ್ಯನವರಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಸ್ಥೆಯ ಕಾರ್ಯದರ್ಶಿ ಬಸನಗೌಡ ಮುಂದಿನಮನಿ ಅಧ್ಯಕ್ಷತೆ ವಹಿಸುವರು. ಗೋಟಗೋಡಿ ಜಾನಪದ ವಿವಿ ಅತಿಥಿ ಉಪನ್ಯಾಸಕ ಡಾ.ನಾಗರಾಜ ಎಸ್., ನಿವೃತ್ತ ಪ್ರಾಚಾರ್ಯ ಎಸ್.ಬಿ.ಕರೆಪ್ಪಗೌಡ, ರಂಗಭೂಮಿ ಜನಪದ ಹಿರಿಯ ಕಲಾವಿದ ಗದಿಗೆಯ್ಯ ಹಿರೇಮಠ, ಡಾ.ಎಚ್.ಎಚ್.ನದಾಪ್ ಹಾಗೂ ಶಾಲೆಯ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಆಡಳಿತ ಮಂಡಳಿ ಸದಸ್ಯರು ಇದ್ದರು.