ಜಾನಪದ ಕಲೆ ಜೀವನದ ಮೌಲ್ಯ ತಿಳಿಸಲು ಸಹಕಾರಿ: ಡಾ.ಮಹದೇವಸ್ವಾಮಿ

| Published : Jan 27 2025, 12:46 AM IST

ಜಾನಪದ ಕಲೆ ಜೀವನದ ಮೌಲ್ಯ ತಿಳಿಸಲು ಸಹಕಾರಿ: ಡಾ.ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದಲ್ಲಿ ಹಲವು ಜಾನಪದ ಕಲೆಗಳನ್ನು ಕಾಣಬಹುದು. ಪೋತ್ಸಾಹ ಹಾಗೂ ಕಲಾವಿದರ ಸಮಸ್ಯೆಯಿಂದ ಕಲೆ ನಶಿಸು ಹೋಗುತ್ತಿರುವ ಪ್ರಸ್ತುತ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಆಗತ್ಯವಿದೆ. ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಜಾನಪದ ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಜಾನಪದ ಕಲೆ ಜೀವನದ ಮೌಲ್ಯವನ್ನು ತಿಳಿಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಹಾಗೂ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಮಹದೇವಸ್ವಾಮಿ ತಿಳಿಸಿದರು.

ಹಾಡ್ಲಿ ಸರ್ಕಾರಿ ಪ್ರೌಢಶಾಲೆ ರಂಗ ಮಂದಿರದ ಆವರಣದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 76ನೇ ಗಣರಾಜೋತ್ಸವ ಅಂಗವಾಗಿ ನಡೆದ ಜಾನಪದ ಕಲಾ ಜೆಂಕಾರ ಮತ್ತು ಸಂಕ್ರಾತಿ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹಲವು ಜಾನಪದ ಕಲೆಗಳನ್ನು ಕಾಣಬಹುದು. ಪೋತ್ಸಾಹ ಹಾಗೂ ಕಲಾವಿದರ ಸಮಸ್ಯೆಯಿಂದ ಕಲೆ ನಶಿಸು ಹೋಗುತ್ತಿರುವ ಪ್ರಸ್ತುತ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಆಗತ್ಯವಿದೆ ಎಂದರು.

ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಜಾನಪದ ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು, ಜಾನಪದ ಕಲೆಯಲ್ಲಿಯೇ ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಅನಾವರಣ ಮಾಡುವ ಅವಕಾಶಗಳಿವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ಶಿಕ್ಷಣ ಇಲಾಖೆ ಎಸ್.ರೇಣುಕಾ, ನಂಜಶೆಟ್ಟಿ, ಶಿವಕುಮಾರಸ್ವಾಮಿ, ಗಾಯಕ ಪ್ರಕಾಶ್ ಅವರಿಗೆ 2025ನೇ ಸಾಲಿನ ಸಾಂಸ್ಕೃತಿಕ ಗೌರವವನ್ನು ನೀಡಿ ಗೌರವಿಸಲಾಯಿತು. ಜಾನಪದ ಗೀತೆಯನ್ನು ಕಲಾವಿದರಾದ ಎಸ್ ಕಾವ್ಯ, ಕೆ.ಎಸ್ ಲಕ್ಷ್ಮಿ, ಬಿ.ಕವನ, ಪವಿತ್ರ ತಂಡ ಪ್ರಸ್ತುತ ಪಡಿಸಿದರು. ಅರ್ಚನ ತಂಡ ಜಾನಪದ ನೃತ್ಯ ಪ್ರದರ್ಶನ ಮಾಡಿದರು. ಅರೆಚಾಕನಹಳ್ಳಿ ಸುಂದರೇಶ್ ಅವರ ಪೂಜಾ ಕುಣಿತ ಹಾಗೂ ತಮಾಟೆ ಪ್ರದರ್ಶನ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಸೋಮಜಮ್ಮ, ಶಿಕ್ಷಕರಾದ ಎಂ.ಪಿ.ಶಿವಪ್ರಕಾಶ್, ಎಂ.ಸರವಣನ್, ಕೆ.ವಿನುತ, ಎಂ. ನಂಜಶೆಟ್ಟಿ, ಎಂ. ಜಯಮ್ಮ, ಎಚ್‌ಎಸ್ ಶಿವಕುಮಾರ್, ಪ್ರಜ್ವಲ್‌ಕುಮಾರ್, ಉಮಾ, ದ್ವಿತೀಯ ದರ್ಜೆ ಸಹಾಯಕ ಪುಟ್ಟರಾಜು, ನೌಕರ ಎಂ.ಎಲ್ ಮಂಜುನಾಥ್, ಕಲಾವಿದರಾದ ಎಂ ಮಹೇಂದ್ರ, ನಾಗೇಶ್, ಮಹೇಶ್, ಸೇರಿದಂತೆ ಇತರರು ಇದ್ದರು.