ಜಾನಪದ ಯಕ್ಷಗಾನ ಸೇರಿದಂತೆ ಸಂಗೀತ ಇತರೆ ಅನೇಕ ರೀತಿಯ ಕಲೆಗಳು ಒತ್ತಡದ ನಿವಾರಣೆ ಸೇರಿದಂತೆ ಮಾನವನ ಬದುಕನ್ನು ಉಲ್ಲಾಸ ಮತ್ತು ಹಗುರಗೊಳಿಸಲು ಸಹಕಾರಿಯಾಗಿವೆ ಎಂದು ಗಾನಕೋಗಿಲೆ ಜಾನಪದ ಕಲಾವಿದ ಹನುಮಂತರಾಯಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಪಾವಗಡ

ಜಾನಪದ ಯಕ್ಷಗಾನ ಸೇರಿದಂತೆ ಸಂಗೀತ ಇತರೆ ಅನೇಕ ರೀತಿಯ ಕಲೆಗಳು ಒತ್ತಡದ ನಿವಾರಣೆ ಸೇರಿದಂತೆ ಮಾನವನ ಬದುಕನ್ನು ಉಲ್ಲಾಸ ಮತ್ತು ಹಗುರಗೊಳಿಸಲು ಸಹಕಾರಿಯಾಗಿವೆ ಎಂದು ಗಾನಕೋಗಿಲೆ ಜಾನಪದ ಕಲಾವಿದ ಹನುಮಂತರಾಯಪ್ಪ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಪಂಚವಟಿ ಕಲಾ ಮತ್ತು ಕ್ರೀಡಾ ಸಂಘ ಕನ್ನಮೇಡಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಸಾಂಸ್ಕ್ರತಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಲೆಗಳು ಮಾನವನ ಬದುಕಿಗೆ ಒಂದು ಪ್ರೇರಣೆಯಾಗಿದ್ದು ಕಲೆಗಳು ಉಳಿಯಬೇಕು. ಗಂಭೀರವಾಗಿ ಪರಿಗಣಿಸಿ ಕಲೆಗಳಿಗೆ ಸರ್ಕಾರ ಹೆಚ್ಚು ಉತ್ತೇಜನ ನೀಡುವಂತೆ ಕರೆ ನೀಡಿದ ಅವರು ಇಂದಿನ ಕಾರ್ಯಕ್ರಮ ಕುರಿತು ಅತ್ಯಂತ ಸಂತಸ ವ್ಯಕ್ತಪಡಿಸಿದರು.

ತಾಲೂಕು ಜಾನಪದ ಮತ್ತು ಯಕ್ಷಗಾನ ಕಲಾವಿದ ಒಕ್ಕೂಟದ ಅಧ್ಯಕ್ಷ ಟಿ.ಗಂಗಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಮುಗ್ದ ಜನತೆಗೆ,ಜಾನಪದ ಯಕ್ಷಗಾನ ಇತರೆ ಕಲೆ ಬದುಕಿಗೆ ಒಂದು ಪ್ರೇರಣೆ, ಕಲೆಗಳ ಬಗ್ಗೆ ಗ್ರಾಮೀಣ ಜನತೆ ಹೆಚ್ಚು ಅಸಕ್ತಿವಹಿಸಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಕಲೆಗಳು ಉತ್ತಮ ಆರೋಗ್ಯ ಹಾಗೂ ನೆಮ್ಮದಿ, ಸೌಹಾರ್ದತೆ ಮತ್ತು ಶಾಂತಿಯುತ ಬದುಕಿಗೆ ಸಹಕಾರಿಯಾಗಿವೆ. ಕಾರ್ಯಕ್ರಮದಲ್ಲಿ ನಡೆದ ಸಾಮೂಹಿಕ ಜಾನಪದ ನೃತ್ಯ, ಹುಲಿವೇಷ ಸುಗಮ ಸಂಗೀತ ಹಾಗೂ ರಂಗಗೀತೆಗಳು ಜನಮನ ಸೆಳೆದು ಚಪ್ಪಾಳೆಗಳಿಂದ ಸಂತಸ ವ್ಯಕ್ತಪಡಿಸಿದರು.

ಕಣಿವೆನಹಳ್ಳಿಯ ಶಾಲೆಯ ಮುಖ್ಯ ಶಿಕ್ಷಕಿ ಅನಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಕಲಾವಿದರಾದ ಪೆಂಡ್ಲಿಜೀವಿ ಈಶ್ವರಚಾರಿ, ಮಲ್ಲಿಕಾರ್ಜುನ, ಮಂಗಳವಾಡ ಹನುಮಂತರಾಯಪ್ಪ, ಗುಜ್ಜನಡು ಭೀಮಯ್ಯ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.