ಗ್ರಾಮೀಣರ ಕಲೆ ಪ್ರದರ್ಶನಕ್ಕೆ ಜಾನಪದ ಸಮ್ಮೇಳನ ಸಹಕಾರಿ: ಡಿ.ಎಸ್.ಸುರೇಶ್

| Published : Feb 06 2024, 01:32 AM IST

ಗ್ರಾಮೀಣರ ಕಲೆ ಪ್ರದರ್ಶನಕ್ಕೆ ಜಾನಪದ ಸಮ್ಮೇಳನ ಸಹಕಾರಿ: ಡಿ.ಎಸ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಕವಳ್ಳಿ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಡಿ.ಎಸ್.ಸುರೇಶ್ ಜಾನಪದ ಸಮ್ಮೇಳನಗಳು ನಡೆಯುತ್ತಿರುವುದು ಗ್ರಾಮೀಣ ಜನರಿಗೆ ಕಲೆ ಪ್ರದರ್ಶಿಸಲು ಅನುಕೂಲವಾಗಿದೆ ಎಂದರು.

- ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಜಾನಪದ ಸಮ್ಮೇಳನಗಳು ನಡೆಯುತ್ತಿರುವುದು ಗ್ರಾಮೀಣ ಜನರಿಗೆ ಕಲೆ ಪ್ರದರ್ಶಿಸಲು ಅನುಕೂಲವಾಗಿದೆ ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.

ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು, ತಾಲೂಕು ಘಟಕ ತರೀಕೆರೆ, ಹೋಬಳಿ ಘಟಕ ಲಕ್ಕವಳ್ಳಿಯಿಂದ ಸಮೀಪದ ಲಕ್ಕವಳ್ಳಿ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜಾನಪದ ಕಲೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಮ್ಮೇಳನಗಳ ಅವಶ್ಯಕತೆ ಇದೆ, ಇದರ ಮೂಲಕ ಕಲಾವಿದರಿಗೆ ವೇದಿಕೆ ಸೃಷ್ಠಿ ಮಾಡಿದ್ದೀರಿ, ಕಲಾವಿದರು ತಮ್ಮ ಪ್ರತಿಭೆಯನ್ನು ಇಲ್ಲಿ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ ಕಳೆದ ವರ್ಷ ನಾನು ಶಾಸಕನಾಗಿದ್ದಾಗ ತ್ಯಾಗದಬಾಗಿಯಲ್ಲಿ ನಡೆದ ಪ್ರಥಮ ಜಾನಪದ ಸಮ್ಮೇಳನದಲ್ಲಿ ಪ್ರತಿ ವರ್ಷ ಸಮ್ಮೇಳನ ನಡೆಯಬೇಕೆಂದು ಹೇಳಿದ್ದೆ ಎಂದು ಸ್ಮರಿಸಿದರು.

ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನರಾವ್ ಜಾದವ್ ಭಜನೆ ಕಲೆ ಮೈಗೂಡಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು ಅವರನ್ನು ನೀವೆಲ್ಲರೂ ಸೇರಿ ಆಯ್ಕೆ ಮಾಡಿದ್ದು ಒಬ್ಬ ಸ್ಥಳೀಯ ಕಲಾವಿದರನ್ನು ಗೌರವಿಸಿದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ನಾಗೇಶ್ ಅವರು ತಾಲೂಕು ಜಿಲ್ಲೆ ಹಾಗೂ ರಾಜ್ಯಮಟ್ಟದವರೆಗೆ ಕನ್ನಡದ ಕಂಪನ ಹರಡಿಸುತ್ತಾ, ಕನ್ನಡದ ವೇಷ ತೊಟ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈಗ ಅವರು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದು ಎರಡು ಮೂರು ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ ಅವರು ಜನನಾಯಕರು. ಹಾಗಾಗಿಯೇ ಗ್ರಾಮಸ್ಥರ, ಹೋಬಳಿ ಜನನಾಯಕರ, ದಾನಿಗಳು ಸಹಕಾರ ಪಡೆದು ಸಹಕಾರ ಪಡೆದು ತುಂಬಾ ಅಚ್ಚುಕಟ್ಟಾಗಿ ಈ ಸಮ್ಮೇಳನ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಂಕರಘಟ್ಟ ಕುವೆಂಪು ವಿಶ್ವ ವಿದ್ಯಾನಿಲಯ ಜಾನಪದ ತಜ್ಞರು ಬಸವರಾಜ್ ನೆಲ್ಲಿಸರ ಮಾತನಾಡಿ ಮೂಲ ಜಾನಪದ ಸಂಗೀತ ಸಾಹಿತ್ಯ ಸಂಸ್ಕೃತಿಯನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನೋಡಬಹುದಾಗಿದೆ. ಯುವಜನಾಂಗ ಆಸಕ್ತಿ ವಹಿಸಿದರೆ ಎಲ್ಲಾ ಕಡೆಯಲ್ಲೂ ಇಂತಹ ಸಮ್ಮೇಳನ ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ, ಬಿ. ಸುರೇಶ್ ಮಾತನಾಡಿ ಜಾನಪದ ಸಮ್ಮೇಳನ ನಡೆಸುವುದು ಬಹಳ ಕಷ್ಟ, ದಾನಿಗಳು ನೀಡಿದ ಸಹಕಾರದಿಂದ ಸಮ್ಮೇಳನ ಅದ್ಧೂರಿಯಾಗಿ ಮೂಡಿಬಂದಿರುವುದು ಸಂತೋಷ ತಂದಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲಾ ಕಲಾ ತಂಡದವರಿಗೆ, ದಾನಿಗಳಿಗೆ ಕೃತಜ್ಞತೆಗಳು ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಮಲ್ಲಿಕಾರ್ಜುನರಾವ್ ಜಾದವ್, ಕಜಾಪ ಗೌರವ ಸಲಹೆಗಾರರಾದ ರಮೇಶ್, ಹೋಬಳಿ ಘಟಕದ ಅಧ್ಯಕ್ಷ ಪಾಂಡುರಂಗ, ಜಿಪಂ ಮಾಜಿ ಅಧ್ಯಕ್ಷ ಶ್ರೀರಾಮ್, ಪಾಂಡು ಜಾದವ್, ಸ.ನೌ.ಸಂಘದ ಅಧ್ಯಕ್ಷ ಎಚ್.ನಾಗರಾಜಪ್ಪ, ಪ್ರಾ.ಕೃಷಿ.ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಕಲಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ.ಜಾ.ಪ.ಅಧ್ಯಕ್ಷ ನಾಗೇಶ್ ಪ್ರಾರ್ಥಿಸಿದರು. ಕೆ.ಆರ್.ಶಿವಕುಮಾರ್ ನಿರೂಪಿಸಿದರು.5ಕೆಟಿಆರ್.ಕೆಃ8ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು, ತಾಲೂಕು ಘಟಕ ತರೀಕೆರೆ, ಹೋಬಳಿ ಘಟಕ ಲಕ್ಕವಳ್ಳಿಯಿಂದ ಏರ್ಪಡಿಸಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟನೆಯನ್ನು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.

ಸುರೇಶ್ ನೆರವೇರಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಮಲ್ಲಿಕಾರ್ಜುನರಾವ್ ಜಾದವ್, ಕ.ಜಾ.ಪ.ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್, ಕ.ಜಾ.ಪ.ತಾಲೂಕು ಅಧ್ಯಕ್ಷ ಆರ್.ನಾಗೇಶ್ ಮತ್ತಿತರರು ಇದ್ದರು.