ಸಾರಾಂಶ
ಜನಪದ ಸಾಹಿತ್ಯ ಕನ್ನಡ ಸಾಹಿತ್ಯ ಕೋಶದ ಬೇರಾಗಿದೆ.
ಕನ್ನಡ ಕಾರ್ತಿಕೋತ್ಸವದ ಉಪನ್ಯಾಸ ಮತ್ತು ಜನಪದ ಗಾಯನ ಕಾರ್ಯಕ್ರಮ
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯಕನ್ನಡಪ್ರಭ ವಾರ್ತೆ ಕಾರಟಗಿ
ಜನಪದ ಸಾಹಿತ್ಯ ಕನ್ನಡ ಸಾಹಿತ್ಯ ಕೋಶದ ಬೇರಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ ಹೇಳಿದರು.ತಾಲೂಕಿನ ಸೋಮನಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಕಾರ್ತಿಕೋತ್ಸವದ ಉಪನ್ಯಾಸ ಮತ್ತು ಜನಪದ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವಿಕರು ಅನಕ್ಷರಸ್ಥರಾದರೂ ಸರಳವಾಗಿ ಜನಪದ ಹಾಡು ರಚಿಸುತ್ತಿದ್ದರು. ಅವರು ರಚಿಸಿ ಹಾಡುಗಳನ್ನು ಇನ್ನೊಬ್ಬರಿಗೆ ಕಲಿಸುತ್ತಿದ್ದರು. ಸುಮಾರು ಹಾಡುಗಳನ್ನು ಸಂದರ್ಭಕ್ಕೆ ತಕ್ಕಂತೆ ಹಾಡುತ್ತಿದ್ದರು. ತಮ್ಮ ಕೆಲಸದ ಆಯಾಸವನ್ನು ಮರೆ ಮಾಚಿಸುವಿಕೆ ದೃಷ್ಟಿಯಿಂದ ಹಾಡು ಹಾಡುತ್ತಿದ್ದರು. ಹಂತಿಯ ಹಾಡು, ಕುಟ್ಟುವ ಹಾಡು, ಸೋಬಾನ ಪದ ಸೇರಿದಂತೆ ಇತರ ಸಂದರ್ಭಕ್ಕನುಗುಣವಾಗಿ ಅವರು ಹಾಡುತ್ತಿದ್ದರು. ಆದರೆ, ಇತ್ತೀಚಿನ ಆಧುನಿಕ ಭರಾಟೆಯ ದಿನಗಳಲ್ಲಿ ಜನಪದ ಹಾಡುಗಳು, ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಅಶ್ಲೀಲ ಭಾಷೆಯ ಕ್ಯಾಸೆಟ್ ಹಾಡುಗಳನ್ನೇ ನಮ್ಮ ಮಕ್ಕಳು ಜನಪದ ಹಾಡುಗಳು, ಸಂಸ್ಕೃತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಷಾದಿಸಿದರು.ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ಮಾತನಾಡಿದರು. ಶಾಲೆ ಮುಖ್ಯಗುರು ರಾಘವೇಂದ್ರ ಕಂಠಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಇಚೇಗೆ ಚುನಾಯಿತರಾದ ಹನುಮಂತಪ್ಪ ತೊಂಡಿಹಾಳ, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್ ಹಿರೇಮಠ ಮತ್ತು ಕಾರ್ಯದರ್ಶಿ ವೆಂಕೋಬ ಚಲವಾದಿ ಹಾಗೂ ಪ್ರಾ. ಶಾ. ಶಿ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಕಸಾಪ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಸದಸ್ಯ ಮಲ್ಲಿಕಾರ್ಜುನ ಯತ್ನಟ್ಟಿ, ಸಿಆರ್‌ಪಿ ಭೀಮಣ್ಣ ಕರಡಿ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಭೋಗೇಶ್, ಎಸ್‌ಡಿಎಂಸಿ ಅಧ್ಯಕ್ಷರಾದ ಬಸವರಾಜ್ ಭಾವಿಕಟ್ಟಿ ಮತ್ತು ಶರಣಪ್ಪ ಮಂತ್ರಿ, ಶಿಕ್ಷಕಿಯರಾದ ಶಶಿಕಲಾ, ಮಾಲಾ, ಶ್ರೀದೇವಿ ಇತರರು ಇದ್ದರು.