ಜೋಗಿಗಳಲ್ಲಿ ೨೭ ಪ್ರಭೇದಗಳಿದ್ದು ಅವರು ನಾಥ ಸಂಪ್ರದಾಯಸ್ಥರು. ಕಸುಬಿಗೆ ಅನುಗುಣವಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು, ಪಾರಂಪರಿಕ ಜ್ಞಾನ ಹೊಂದಿದವರಾಗಿದ್ದಾರೆ. ಅವರಲ್ಲಿ ಕಲೆ ಮತ್ತು ದೇಶಿ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ.
ಧಾರವಾಡ:
ಜೋಗಿ ಬುಡಕಟ್ಟು ಜನಾಂಗವು ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧದೊಂದಿಗೆ ಕಲಾವಿದರು ಜನಪದ ಕಲಾ ಪ್ರದರ್ಶನಗಳಲ್ಲಿ ಪ್ರಾವಿಣ್ಯತೆ ಹೊಂದಿದವರಾಗಿದ್ದಾರೆ ಎಂದು ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಆನಂದಪ್ಪ ಬಿ.ಎಚ್. (ಜೋಗಿ) ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ಬುಡಕಟ್ಟು ಜೋಗಿ ಸಮುದಾಯದ ಅಸ್ಮಿತೆ” ವಿಷಯ ಕುರಿತು ಮಾತನಾಡಿದರು.
ಜೋಗಿಗಳಲ್ಲಿ ೨೭ ಪ್ರಭೇದಗಳಿದ್ದು ಅವರು ನಾಥ ಸಂಪ್ರದಾಯಸ್ಥರು. ಕಸುಬಿಗೆ ಅನುಗುಣವಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು, ಪಾರಂಪರಿಕ ಜ್ಞಾನ ಹೊಂದಿದವರಾಗಿದ್ದಾರೆ. ಅವರಲ್ಲಿ ಕಲೆ ಮತ್ತು ದೇಶಿ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ. ಅದು ವ್ಯಕ್ತಿಗತವಾಗಿರದೆ ವಿಶಾಲತೆಯಿಂದ ಕೂಡಿದ್ದಾಗಿದೆ. ಅಂತಹ ಸಂಸ್ಕೃತಿ ಮತ್ತು ದೇಶಿ ಜ್ಞಾನದ ಮೆಲುಕು ಹಾಕುವುದರಿಂದ ನಮ್ಮ ಜೀವನ ಸಾರ್ಥಕವಾಗಲಿದೆ ಎಂದರು.ಬುಡಕಟ್ಟು ಜೋಗಿ ಜನಾಂಗದವರು ಮೂಲ ಪರಂಪರೆಗೆ ಅನುಗುಣವಾಗಿ ನಾಡು, ನುಡಿ, ನೆಲ, ಜಲ, ಕಲೆ ವಿಷಯಾಧಾರಿತ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಜನಪದ ಸಾಹಿತ್ಯ ನೀತಿಯನ್ನು ಕಲಿಸುತ್ತದೆ ಎಂದ ಅವರು, ವೇಷ-ಭೂಷಣದೊಂದಿಗೆ ನಾಡಿಗೆ, ಕುಟುಂಬಕ್ಕೆ ಸಂಬಂಧಿಸಿದ ಹಾಡುಗಳನ್ನು ಹೃದಯ ಸ್ಪರ್ಶಿಯಾಗಿ ಪ್ರಸ್ತುತಪಡಿಸಿ, ಜನಪದ ಕಲಾವಿದರಿಗೆ ಮಾಸಾಶನ ಹೆಚ್ಚಳ ಸೇರಿದಂತೆ ಸಹಕಾರ, ಪೋಷಣೆಯು ಸರ್ಕಾರ ಹಾಗೂ ಸಮಾಜದಿಂದ ಹೆಚ್ಚು ಸಿಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಜನಪದ ಸಾಹಿತ್ಯ ಅನುಭವ ಹಾಗೂ ಸತ್ಯದಿಂದ ಕೂಡಿದ್ದು, ಕಲಾವಿದರಲ್ಲಿ ಜಾತೀಯತೆ ಸಂಕುಚಿತತೆ ಇರುವುದಿಲ್ಲ. ಸಮಾಜಮುಖಿ ವ್ಯಕ್ತಿತ್ವವನ್ನು ಕಲೆ ಮೂಲಕ ಅವರಲ್ಲಿ ಕಾಣಬಹುದಾಗಿದೆ. ಜೋಗಿ ಜನಾಂಗ ಇಡೀ ಸಮಾಜಕ್ಕೆ ನೀಡಿದ ಜನಪದವಾಗಿದೆ ಎಂದು ಹೇಳಿದರು.೨೦೨೫-೨೬ನೇ ಸಾಲಿನ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಲಹಾ ಸಮಿತಿ ಸದಸ್ಯರನ್ನು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಗೌರವಿಸಿ ಪ್ರಮಾಣ ಪತ್ರ ವಿತರಿಸಿದರು.
ಜಯಶ್ರೀ ಪಾಟೀಲ ಪ್ರಾರ್ಥಿಸಿದರು, ಭೀಮಪ್ಪ ಖಟಾವಿ ಸ್ವಾಗತಿಸಿದರು. ಸಂಚಾಲಕರಾದ ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು, ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶ್ರೀನಿವಾಸ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಆರ್.ಎಸ್. ಬಾಳನಗೌಡರ, ಮೋಹನ ಪಾಟೀಲ, ಗಣಪತಿ ಬಡಿಗೇರ, ಲಾಲಸಾಬ ಬೂದಿಹಾಳ, ಕಲ್ಲನಗೌಡ ಸಿದ್ಧಾಪೂರ, ಡಾ. ವೀಣಾ ಬಿರಾದಾರ, ಶೋಭಾ ಸಜ್ಜನ, ಸದಾಶಿವ ಚೌಶೆಟ್ಟಿ, ಪ್ರಕಾಶ ಮಲ್ಲಿಗವಾಡ, ಬಿ.ಐ. ಈಳಿಗೇರ, ಶಿವಣ್ಣ ಬೆಂಗೇರಿ, ಸಿದ್ಧರಾಮ ಹಿಪ್ಪರಗಿ, ಮಡಿವಾಳಪ್ಪ ಹೆಗ್ಗೇರಿ, ಎಂ.ಜಿ. ವಸ್ತ್ರದ, ರಾಯ್ಕರ, ಗೌಳಿ ಸೇರಿದಂತೆ ಕಲಾವಿದರು ಮುಂತಾದವರು ಪಾಲ್ಗೊಂಡಿದ್ದರು.