ಸಾರಾಂಶ
Folk song competition program at Tarikere
ತರೀಕೆರೆ: ತಾಲೂಕು ಆಡಳಿತ ತರೀಕೆರೆ ಹಾಗೂ ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಇವರ ಸಹಯೋಗದಲ್ಲಿ ಕರ್ನಾಟಕ 50 ರ ಸಂಭ್ರಮದ ಪ್ರಯುಕ್ತ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನಪದ ಗೀತೆ ಸ್ಪರ್ಧೆ ನಡೆಯಿತು.
ಕಜಾಪ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಹಿಣಿ ನರಸಿಂಹ ಮೂರ್ತಿ, ವಿಜಯ ಪ್ರಕಾಶ್ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್ ತೀರ್ಪುಗಾರರಾಗಿ ಭಾಗವಹಿಸಿದ್ದರು.15 ಜನ ಹಿರಿಯರು ಹಾಗೂ 3 ಜನ ಕಿರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಜಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಲಾ ಮತ್ತು ಮೋಹನ್ ರಾವ್ ಜಾಧವ್, ಕಸಾಪ ಸದಸ್ಯ ಸಯದ್ ಮುಹೀಬುಲ್ಲಾ ಉಪಸ್ಥಿತರಿದ್ದರು.
-----ಫೋಟೊ: 28ಕೆಟಿಆರ್.ಕೆ.12
ತರೀಕೆರೆಯಲ್ಲಿ ತಾಲೂಕು ತಾಲೂಕು ಆಡಳಿತ ತರೀಕೆರೆ ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಕರ್ನಾಟಕ 50 ರ ಸಂಭ್ರಮ ಅಂಗವಾಗಿ ಜಾನಪದ ಗೀತೆ ಸ್ಪರ್ಧೆ ನಡೆಯಿತು.