ಜೀವನದ ಪ್ರತಿ ಹಂತದಲ್ಲೂ ಜನಪದ ಗೀತೆಗಳು ಮುಖ್ಯ :ಡಾ.ಬಿ.ವಿ.ನಂದೀಶ್

| Published : Mar 01 2025, 01:03 AM IST

ಜೀವನದ ಪ್ರತಿ ಹಂತದಲ್ಲೂ ಜನಪದ ಗೀತೆಗಳು ಮುಖ್ಯ :ಡಾ.ಬಿ.ವಿ.ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಾನವನ ಜೀವನದ ಪ್ರತಿ ಹಂತದಲ್ಲೂ ಜನಪದ ಗೀತೆಗಳು ಬಹಳ ಮುಖ್ಯವಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾನವನ ಜೀವನದ ಪ್ರತಿ ಹಂತದಲ್ಲೂ ಜನಪದ ಗೀತೆಗಳು ಬಹಳ ಮುಖ್ಯವಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ಕಲರವ ಸಾಂಸ್ಕೃತಿ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ಕಾಲೇಜಿನ ಮೌಲ್ಯಮಾಪನ ಕೊಠಡಿಯಲ್ಲಿ ನಡೆದ ಜನಪದ ಗೀತೆಗಳ ತರಬೇತಿ ಕಾರ್ಯಕ್ರಮವನ್ನು ಕಂಸಾಳೆ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜನಪದ ಗೀತೆಗಳು ನಮ್ಮ ಜೀವನದ ಒಂದು ಭಾಗವಾಗಿವೆ ಎಂದರು.

ಜನಪದ ಎಂಬುದು ಹೆತ್ತ ತಾಯಿಯಂತೆ. ನಾವು ಬೇರೆಯವರನ್ನು ಹೆತ್ತ ತಾಯಿ ಎನ್ನುವುದಿಲ್ಲ. ಹಾಗೆಯೇ ಕನ್ನಡ ಮತ್ತು ಜನಪದ ಹೆತ್ತ ತಾಯಿಯಂತೆ. ನಮ್ಮ ಭಾಷೆ ಮತ್ತು ಸಂಸ್ಕೃತಿ ಕುರಿತು ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್ ಪ್ರಭು ಮಾತನಾಡಿ, ರಾಗಿ ಬೀಸುವ ಹಾಡು, ಬುತ್ತಿ ಕಟ್ಟುವಾಗ ಹೇಳಿದ ಹಾಡು, ಭತ್ತ ಕುಟ್ಟುವಾಗ ಹಾಡಿದ ಹಾಡು, ತೊಟ್ಟಿಲು ತೂಗುವಾಗ ಹೇಳುವ ಲಾಲಿ ಹಾಡು, ಸಮಾರಂಭಗಳಲ್ಲಿ ಹೇಳುವ ಹಾಡುಗಳು, ಗೀಗಿ ಪದ ಎಲ್ಲವೂ ಕೂಡ ಅವರವರ ಅನುಭವದ ಬುತ್ತಿಗಳಾಗಿರುತ್ತವೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜನಪದದ ಹಿನ್ನೆಲೆ ಇರುತ್ತದೆ ಎಂದರು.

ಜನಪದ ಕಲಾವಿದ ಹಾಗೂ ಆಕಾಶವಾಣಿ ಕಲಾವಿದ ಡಾ.ಪಿ.ಸೋಮಶೇಖರ್ ವಿದ್ಯಾರ್ಥಿಗಳಿಗೆ ಜನಪದ ಗೀತೆಗಳನ್ನು ಹೇಳಿಕೊಡುವ ಜೊತೆಗೆ ಮಹತ್ವವನ್ನು ತಿಳಿಸಿಕೊಟ್ಟರು.

ಸಮಾರಂಭದಲ್ಲಿ ಸಹ ಪ್ರಾಧ್ಯಾಪಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಚಂದ್ರಕಾಂತ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್.ಮಂಜೇಶ್ ಚನ್ನಾಪುರ, ರಂಗಭೂಮಿ ಕಲಾವಿದ ಮುರುಗೇಶ್, ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಜ್ಯೋತಿ.ಎಸ್.ಬಿ., ಡಾ.ಶಿವಕೀರ್ತಿ, ಡಾ.ನಿಂಗರಾಜು ಎಚ್.ಎಸ್., ಅಶೋಕ್.ಸಿ., ರಘು, ಕಲರವ ಟ್ರಸ್ಟ್‌ನ ಅಧ್ಯಕ್ಷ ಸುಮಂತ.ಎಂ.ಸಿ., ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರತಾಪ್.ಕೆ.ವಿ. ಉಪಸ್ಥಿತರಿದ್ದರು.