ಜೀವನ ಸನ್ಮಾರ್ಗಕ್ಕೆ ಮಹಾವೀರರ ತತ್ವ ಪಾಲಿಸಿ

| Published : Apr 12 2025, 12:49 AM IST

ಸಾರಾಂಶ

ಮಹಾವೀರರ ತತ್ವಗಳು ಇಂದಿನ ಮನಕುಲಕ್ಕೆ ದಿವ್ಯ ಸಂದೇಶ ಹಾಗೂ ಲೋಕೋದ್ಧಾರಕ್ಕೆ ಮಾರ್ಗಗಳಾಗಿವೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಅಹಿಂಸಾ ಪರಮೋ ಧರ್ಮ ಎಂದು ಸಾರಿದ ಭಗವಾನ ಮಹಾವೀರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ಸಾಗಿದಂತೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಮಹಾವೀರ ಸಗರಿ ಹೇಳಿದರು.

ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್‌ನ ಪಿಯುಸಿ ಮತ್ತು ಬಿಎಸ್‌ಡಬ್ಲ್ಯೂ ಕಾಲೇಜು ಹಾಗೂ ಎಂಬಿಎಸ್ ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಆಶ್ರಯದಲ್ಲಿ ಭಗವಾನ ಗೊಮ್ಮಟೇಶ ಬಾಹುಬಲಿ ಸ್ವಾಮೀಜಿ ಸನ್ನಿಧಾನದಲ್ಲಿ ನಡೆದ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಹಾವೀರರಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾವೀರರ ತತ್ವಗಳು ಇಂದಿನ ಮನಕುಲಕ್ಕೆ ದಿವ್ಯ ಸಂದೇಶ ಹಾಗೂ ಲೋಕೋದ್ಧಾರಕ್ಕೆ ಮಾರ್ಗಗಳಾಗಿವೆ. ಸಹಬಾಳ್ವೆಯೇ ಭಾರತದ ಜೀವಾಳವಾಗಿದೆ. ವಿವಿಧ ಧರ್ಮಗಳ ನಡುವೆ ಸಾಮರಸ್ಯ, ಸಹಬಾಳ್ವೆ, ಭಾರತೀಯ ಸಂಸ್ಕೃತಿಗೆ ಭಗವಾನ ಮಹಾವೀರರ ತತ್ವಗಳು ದಿವ್ಯ ಸಂದೇಶವಾಗಿವೆ. ಪರಪಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೆಡು ಬಯಸುವುದರಿಂದ ಕರ್ಮವು ಬಿಡದೆ ಬೆಂಬತ್ತುವುದು. ತನಗಿಂತ ಕನಿಷ್ಟರಾದವರ ಬಗ್ಗೆ ಪ್ರಾಣಿ-ಪಕ್ಷಿ, ಸಸ್ಯ ಸಂಕುಲನದ ಬಗ್ಗೆ ದಯೇ ಇರಬೇಕು. ಅನ್ನದಾನ, ಅಭಯದಾನ, ಶಾಸ್ತ್ರದಾನ, ವಿದ್ಯಾದಾನಗಳು ಶ್ರೇಷ್ಠದಾನಗಳು ಎಂದು ಭಗವಾನ ಮಹಾವೀರರು ಸಾರಿದ್ದಾರೆಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕ ಗೊಮ್ಮಟೇಶ್ವರ ಸಗರಿ, ಲಲಿತಾ ಸಗರಿ, ಮಾಣಿಕ ಸಗರಿ, ಡಿಸಿಸಿ. ಬ್ಯಾಂಕಿನ ಕಂಪ್ಯೂಟರ ಇಂಜನಿಯರ್ ಅನಿಲಕುಮಾರ ಸಗರಿ, ಸುನಿತಾ ಸಗರಿ, ರಾಜೇಶ್ವರಿ, ಮಹಾವೀರ ಮಂಕಣಿ ಕಾಲೇಜಿನ ಪ್ರಾಚಾರ್ಯರಾದ ವಿಪುಲ್ ಸಗರಿ, ಸಿಬ್ಬಂದಿ ವರ್ಗದವರಾದ ಅಕ್ಷತಾ ಸಗರಿ, ನಮ್ರತಾ ಸಗರಿ, ಜಿ.ಡಿ.ಬಡಿಗೇರ, ಅಶೋಕ ಎಚ್.ಎಚ್.ಎಸ್.ಗೌಡರ್, ಬಸವರಾಜ ಬಡಿಗೇರ, ಶ್ರೀಶೈಲ್ ಹತ್ತಿ, ಸಮೀರ್.ಬಿ, ರೋಹಿನಿ ನಾಯ್ಕೋಡಿ, ಅವಿನಾಶ ಪಂಪಣ್ಣವರ, ರವಿ ಮರೋಳ, ಗದ್ಯಪ್ಪ ಕುಂದರಗಿ ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.