ಸಾರಾಂಶ
ಪವಿತ್ರ ಕ್ಷೇತ್ರವಾದ ದೇವಾಲಯಗಳಲ್ಲಿ ಶ್ರದ್ದಾಭಕ್ತಿಯ ನಿಯಮಗಳನ್ನು ಪಾಲಿಸಿಕೊಂಡು ಬರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.
ಹೊಸಳ್ಳಿಯಲ್ಲಿ ಶ್ರೀ ಮುಳ್ಳೇಶ್ವರಸ್ವಾಮಿ- ತುಗ್ಗಲಮರದಮ್ಮ ದೇವಿ ನೂತನ ದೇವಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪವಿತ್ರ ಕ್ಷೇತ್ರವಾದ ದೇವಾಲಯಗಳಲ್ಲಿ ಶ್ರದ್ದಾಭಕ್ತಿಯ ನಿಯಮಗಳನ್ನು ಪಾಲಿಸಿಕೊಂಡು ಬರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು. ತಾಲೂಕಿನ ಮರ್ಲೆ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಶ್ರೀ ಮುಳ್ಳೇಶ್ವರಸ್ವಾಮಿ ಮತ್ತು ತುಗ್ಗಲಮರದಮ್ಮ ದೇವಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಟಾಪನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಹೊಸಳ್ಳಿಯ ನೂತನ ದೇವಾಲಯಕ್ಕೆ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಒಕ್ಕಲಿರುವ ಹಿನ್ನೆಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ದೇವಾಲಯ ಲೋಕಾರ್ಪಣೆಗೊಂಡಿದೆ. ಹೀಗಾಗಿ ಗ್ರಾಮಸ್ಥರು ದೇವಾಲಯ ನಿರ್ಮಿಸಿದರೆ ಸಾಲದು ಶುಚಿತ್ವ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತು ನಿಭಾಯಿಸಬೇಕು ಎಂದು ತಿಳಿಸಿದರು. ದೇವಾಲಯ ಬಹುತೇಕ ಪೂರ್ಣಗೊಂಡಿಸಿದ್ದು ಇನ್ನಿತರೆ ಬಾಕಿಯಿರುವ ಕಾಮಗಾರಿಗಳಿಗೆ ಶಾಸಕಿ ನಯನ ಮೋಟಮ್ಮ ನವರು 2.5 ಲಕ್ಷ ರು. ಮೀಸಲಿರಿಸಿದ್ದು ಅನುದಾನ ಸಮಪರ್ಕವಾಗಿ ಬಳಸಿ ದೇವಾಲಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಕಳೆದ ಎರಡು ದಿನಗಳಿಂದ ನೂತನ ದೇವಾಲಯ ಪೂಜಾ ಕೈಂಕರ್ಯಗಳು ಗ್ರಾಮದಲ್ಲಿ ನಡೆಯುತ್ತಿದ್ದು ಕೊನೆ ದಿನವಾದ ಇಂದು ನೂರಾರು ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಅನಾವರಣಗೊಳ್ಳುತ್ತಿರುವುದು ಖುಷಿಯ ಸಂಗತಿ ಎಂದರು. ಗ್ರಾಪಂ ಸದಸ್ಯೆ ರೂಪ ಚಿಕ್ಕೇಗೌಡ ಮಾತನಾಡಿ, ದೇವಾಲಯ ಲೋಕಾರ್ಪಣೆ ಕಾರ್ಯ ಬೆಳಗಿನ ಜಾವ 6 ರಿಂದ ಗಣಪತಿ ಹೋಮ, ಪರಿವಾರ ದೇವತೆಗಳ ಹೋಮ, ಮಹಾರುದ್ರ ಹೋಮ ನಡೆದವು. ಮಧ್ಯಾಹ್ನ 12.30 ಕ್ಕೆ ಗ್ರಾಮಸ್ಥರಿಗೆ ಅನ್ನ ಸಂಪರ್ತಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ಎಂ.ವಿಜಯ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕೆಂಚೇಗೌಡ, ಎಂ.ಕೆ.ಮಂಜುನಾಥಶೆಟ್ಟಿ, ಕೆ.ಎಸ್.ಪ್ರಕಾಶ್, ಸದಸ್ಯರಾದ ಹೂವಮ್ಮ ಮೊಗಣ್ಣ, ಭಾಗ್ಯ ಮಲ್ಲೇಶ್, ಚಂದ್ರಪ್ಪ, ಬಸವರಾಜ್, ಗ್ರಾಮಸ್ಥರಾದ ಚಿಕ್ಕೇಗೌಡ, ಬೀರೇಗೌಡ, ಸಂತೋಷ್, ಅರ್ಚಕರಾದ ಶಾಂತ ಮಲ್ಲಯ್ಯ, ಉಮೇಶ್, ಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. 20 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶ್ರೀ ಮುಳ್ಳೇಶ್ವರಸ್ವಾಮಿ ಮತ್ತು ತುಗ್ಗಲಮರದ ಮ್ಮದೇವಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಟಾಪನಾ ಸಮಾರಂಭ ಮಹೋತ್ಸವವನ್ನು ಗಾಯತ್ರಿ ಶಾಂತೇಗೌಡ ಉದ್ಘಾಟಿಸಿದರು. ಮಂಜುನಾಥ್, ವಿಜಯಕುಮಾರ್ ಇದ್ದರು.