ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಮಹಿಳಾ ಸೇವಾ ಸಮಾಜದಲ್ಲಿರುವ ೨೫ ಅನಾಥ ಮಕ್ಕಳಿಗೆ ಇನ್ನರ್‌ವೀಲ್ ಕ್ಲಬ್ ವತಿಯಿಂದ ರೆಕ್ಸಿನ್ ಫೋಮಾ ಹಾಸಿಗೆ ವಿತರಿಸಲಾಯಿತು.ಇನ್ನರ್ ವೀಲ್ ಸಂಸ್ಥೆಯು ಈ ಬಾರಿ ೧೫೦ ಪ್ರಾಜೆಕ್ಟ್ ತೆಗೆದುಕೊಂಡಿದೆ. ಸರ್ಕಾರಿ ಶಾಲೆಗಳಿಗೆ ನೂರು ಲೀಟರ್ ಸಾಮರ್ಥ್ಯದ ಆರ್.ಓ. ವಾಟರ್ ಫಿಲ್ಟರ್, ಬೆಂಚ್, ನೋಟ್‌ಬುಕ್‌ಗಳನ್ನು ವಿತರಿಸಿದ್ದೇವೆ. ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡಲಾಗಿದೆ. ಇದರಿಂದ ಅವರು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಇದು ನಮ್ಮ ಸಂಸ್ಥೆಗೆ ಸಂತಸ ತಂದಿದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಹಾಗೂ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ ಹೇಳಿದರು.
ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ. ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ನನ್ನ ಅವಧಿಯಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಆತ್ಮತೃಪ್ತಿಯಿದೆ ಎಂದು ಮೋಕ್ಷರುದ್ರಸ್ವಾಮಿ ತಿಳಿಸಿದರು.ವೀಣಸ್ವಾಮಿ ಮಾತನಾಡಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮೋಕ್ಷರುದ್ರಸ್ವಾಮಿ ಒಂದು ವರ್ಷದ ಅವಧಿಯಲ್ಲಿ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ. ಮಹಿಳಾ ಸೇವಾ ಸಮಾಜದಲ್ಲಿರುವ ೨೫ ಅನಾಥ ಮಕ್ಕಳಿಗೆ ಗುಣಮಟ್ಟದ ರೆಗ್ಸಿನ್ ಬೆಡ್‍ಗಳನ್ನು ನೀಡಿರುವುದಲ್ಲದೆ ಬಡ ಮಕ್ಕಳಿಗೆ ಪುಸ್ತಕ, ನೋಟ್‍ಬುಕ್ ವಿತರಿಸಿ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲತಾ ಉಮೇಶ್, ರಾಜೇಶ್ವರಿ ಸಿದ್ದರಾಂ, ನಂದಿನಿಶಿವಪ್ರಕಾಶ್, ಶಿಲ್ಪಜಗದೀಶ್, ಭಾಗ್ಯ ಕುಮಾರ್, ಮಹಾಂತಮ್ಮ, ವಿಜಯ ಮುಂತಾದವರು ಹಾಜರಿದ್ದರು.--------ಫೋಟೊ: ಇನ್ನರ್‌ವೀಲ್ ಕ್ಲಬ್ ವತಿಯಿಂದ ಮಹಿಳಾ ಸೇವಾ ಸಮಾಜದಲ್ಲಿರುವ ೨೫ ಮಕ್ಕಳಿಗೆ ಫೋಮ್ ಹಾಸಿಗೆಗಳನ್ನು ವಿತರಣೆ ಮಾಡಲಾಯಿತು.