- ಫೆ.13 ಮತ್ತು 14ರಂದು ಸಹ ಭಕ್ತರಿಗೆ ದಾಸೋಹ ಕಲ್ಪಿಸಿದ್ದ ಮಾಲೀಕರು
---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇಲ್ಲಿನ ಶ್ರೀ ಗೌರಿ ಸಿಲ್ಕ್ಸ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಸಾರ್ವಜನಿಕರಿಗೆ ಭಾನುವಾರ ಅನ್ನಸಂತರ್ಪಣೆ ಮಾಡಲಾಯಿತು. ಪಟ್ಟಣದ ಗೌರಿ ಸಿಲ್ಕ್ಸ್ ಮಳಿಗೆ ಮುಂಭಾಗದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವಿತರಿಸಿದ ಬಳಿಕ ಮಾಲೀಕ ಎಂ.ನಟರಾಜನ್ ಮಾತನಾಡಿ, ನಮ್ಮ ಗೌರಿ ಸಿಲ್ಕ್ಸ್ ವತಿಯಿಂದ ಇದೇ ಮೊದಲ ಬಾರಿಗೆ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ, ಭಕ್ತಾಧಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ತಾಳಬೆಟ್ಟದಲ್ಲಿ ಫೆ.13 ಹಾಗೂ 14ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ತೆರಳುವ ಭಕ್ತಾದಿಗಳಿಗೂ ಸಹ 2 ದಿನಗಳ ಕಾಲ ದಾಸೋಹ ಕಲ್ಪಿಸಲಾಗಿತ್ತು. ದಣಿದ ಬರುವ ಸಾವಿರಾರು ಪಾದಯಾತ್ರೆಗಳಿಗೆ ನೀರಿನ ಬಾಟಲ್ ನೀಡಲಾಗಿದೆ. ಮುಂದಿನ ದಿನಗಳಲ್ಲೂ ನಮ್ಮ ಶಕ್ತಿ ಮೀರಿ ಸೇವಾ ಕೈಂಕರ್ಯ ಮುಂದುವರೆಸುತ್ತೆವೆ’ ಎಂದರು.ಈ ಸಂಧರ್ಭದಲ್ಲಿ ನಟರಾಜನ್ ರವರ ಪತ್ನಿ ತಿಲಕವತಿ, ಪುತ್ರರು ಗೌರಿಶಂಕರ್, ಸೊಸೆ ಅಕ್ಷತಾ, ಲೋಶಿತ್, ಯುವನ್ ಇನ್ನಿತರಿದ್ದರು.---15ಕೆಜಿಎಲ್34
ಕೊಳ್ಳೇಗಾಲದ ಗೌರಿ ಸಿಲ್ಕ್ ವತಿಯಿಂದ ಮಬೆಟ್ಟಕ್ಕೆ ತೆರಳುವ ಭಕ್ತರು ಹಾಗೂ ನಾಗರಿಕರಿಗೆ ದಾಸೋಹ ವಿನಿಯೋಗ ಮಾಡಲಾಯಿತು.