ಕೊಳಲಗಿರಿಯಲ್ಲಿರುವ ಸ್ವರ್ಗ ಉಚಿತ ಆಶ್ರಮಕ್ಕೆ ಅಕ್ಕಿ, ಬೇಳೆಕಾಳು, ಎಣ್ಣೆ, ಬೆಲ್ಲ, ಹಣ್ಣುಹಂಪಲುಗಳು, ದಿನ ಬಳಕೆ ವಸ್ತುಗನ್ನು ನೀಡಲಾಯಿತು.

ಮಣಿಪಾಲ: ಇಲ್ಲಿನ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ವತಿಯಿಂದ ಭಾನುವಾರ ಹೋಂ ಡಾಕ್ಟರ್ ಫೌಂಡೇಶನ್ ಇದರ ಕೊಳಲಗಿರಿಯಲ್ಲಿರುವ ಸ್ವರ್ಗ ಉಚಿತ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಹಾಗೂ ಆಶ್ರಮಕ್ಕೆ ಬೇಕಾಗಿರುವಂತಹ ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆಕಾಳು, ಎಣ್ಣೆ, ಬೆಲ್ಲ, ಹಣ್ಣುಹಂಪಲುಗಳು ಹಾಗೆ ದಿನ ಬಳಕೆ ವಸ್ತುಗಳಾದ ಫಿನಾಯಿಲ್, ಟೂತ್ ಪೇಸ್ಟ್, ಸಾಬೂನು ಹಾಗೂ ಆಶ್ರಮಕ್ಕೆ ಅಗತ್ಯವಿರುವ ಇಡ್ಲಿ ತಯಾರಿಸುವ ಪಾತ್ರೆಯನ್ನು ನೀಡಲಾಯಿತು. ಈ ಸಂದರ್ಭ ಆಶ್ರಮದ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಅವರು ವೇದಿಕೆಯ ಸದಸ್ಯರನ್ನು ಸ್ವಾಗತಿಸಿ ಆಶ್ರಮದ ಪರಿಚಯ ಮಾಡಿಕೊಟ್ಟರು. ವೇದಿಕೆ ಮೇಲೆ ಮಂಗಳಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ ನಟರಾಜ ಪರ್ಕಳ, ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಣೈ. ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಉಪಸ್ಥಿತರಿದ್ದರು. ಈ ಸಂದರ್ಭ ವೇದಿಕೆ ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ್ ಕಬ್ಯಾಡಿ, ಗಜೇಂದ್ರ ಆಚಾರ್ಯ ಬಾಳ್ಕಟ್ಟ, ಗೋಪಿ ಹಿರೇಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿ ಬೆಟ್ಟು, ಅನಂತರಾಮ್ ನಾಯಕ್ ಸಣ್ಣಕ್ಕಿಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಸತೀಶ್ ಶೆಟ್ಟಿಗಾರ್, ಬಸವರಾಜ್ ನಡಿದಾರೆ ಉಪಸ್ಥಿತರಿದ್ದರು.