ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ

| Published : May 16 2024, 12:52 AM IST

ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲೆಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಅವರು ಕಲಬುರಗಿ ನಗರದ ರಾಮನಗರ ಸ್ಲಂ ಬಡಾವಣೆಯ ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇತ್ತೀಚೆಗಿನ ದಿನಗಳಲ್ಲಿ ತಮ್ಮ ಹುಟ್ಟುಹಬ್ಬದಂದು ದುಂದು ವೆಚ್ಚ ಮಾಡುವ ಮೂಲಕ ಬಹಳ ವಿಜೃಂಭಣೆಯಿಂದ ಜನ್ಮದಿನ ಆಚರಿಸಿಕೊಳ್ಳುವ ಹವ್ಯಾಸ ಒಂದೆಡೆಯಾದರೆ ಕಲಬುರಗಿ ಜಿಲ್ಲೆಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಅವರು ಕಲಬುರಗಿ ನಗರದ ರಾಮನಗರ ಸ್ಲಂ ಬಡಾವಣೆಯ ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.

ಕಿಟ್ ವಿತರಿಸಿದ ನಂತರ ಮಾತನಾಡಿದ ಡಾ. ಫಾರುಕ್ ಮನ್ನೂರ ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ಜನರ ಕಷ್ಟಗಳನ್ನು ಅರಿತು ಅಶಕ್ತರಿಗೆ ನೆರವಾಗಬೇಕು, ಇತರರಿಗೆ ನೆರವಾಗುವುದು ಮಾನವೀಯ ಗುಣ, ಇಂತಹ ಕೆಲಸಗಳನ್ನು ಹಲವಾರು ಜನ ಆಚರಿಸಿದ್ದಾರೆ, ಆದ್ದರಿಂದ ನನ್ನ ಹುಟ್ಟುಹಬ್ಬದಂದು ಬಡ ಕುಂಟುಬಗಳಿಗೆ ಆಹರ ಪದಾರ್ಥದ ಕಿಟ್ ನೀಡಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡಿದ್ದೇನೆ. ಮುಂದೆಯೂ ಇದೇರೀತಿ ನೊಂದ ಬಡವರಿಗೆ ನೆರವಾಗುವ ಮೂಲಕ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುತ್ತೇನೆ ಎಂದರು.

ನಂತರ ಕರ್ನಾಟಕ ಸ್ಲಂ ಜನಾಂದಲೋನ ಸಂಘಟನೆ ಜಿಲ್ಲಾಧ್ಯಕ್ಷೆ ರೇಣುಕಾ ಸರಡಗಿ ಮಾತನಾಡಿ 500 ಕ್ಷಯ ಪೀಡಿತರನ್ನು ದತ್ತು ಪಡೆದು ಕಲ್ಯಾಣ ಕರ್ನಾಟಕ ಭಾಗದಿಂದ ಡಾ. ಫಾರೂಕ್ ಮಣೂರ್ ಹೀಗೆ ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ ಏಕೈಕ ವೈದ್ಯರಾಗಿರೋದು ಹೆಮ್ಮೆ ಎಂದರು.

ಕಳೆದ ಮೂರು ವರ್ಷಗಳಿಂದ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅರವಟಿಗೆಗಳನ್ನು ಅಳವಡಿಸಿ ಆ ಮೂಲಕ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸವನ್ನು ಡಾ.ಫಾರೂಕ್ ಮಣ್ಣೂರ್ ಮಾಡಿದ್ದಾರೆ. ಜೊತೆಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಮತ್ತು ಬಿಸಿಲಿನಿಂದ ಆಸರೆ ದೊರೆಯಲು ಕೊಡೆ ವ್ಯವಸ್ಥೆ , ಟ್ರಾಫಿಕ್ ಪೊಲೀಸರಿಗೆ ಹೆಲ್ಮೆಟ್ ವಿತರಣೆ, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಡಿ ಬಡ ಕುಂಟುಂಬದ 500 ಹೆಣ್ಣು ಬಾಲಕಿಯರಿಗೆ ದತ್ತು ಪಡೆದು ಅವರ ಕಂತಿನ ಹಣ ಪಾವತಿಸುತ್ತಿದ್ದಾರೆ. ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಾಮಾಜಿಕ ಕಾರ್ಯಗಳ ಭಾಗವಾಗಿ ಕಲಬುರಗಿ. ಬೀದರ .ಯಾದಗೀರಿ ಜಿಲ್ಲೆ ಹಾಗೂ ತಾಲೂಕು, ಗ್ರಾ.ಪಂ ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಿ ಉಚಿತ ಔಷದಿಗಳನ್ನು ವೀತರಿಸುವ ಮೂಲಕ‌ ಅನೇಕ‌ ಸಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಇವತ್ತು ಅವರ ಜನ್ಮದಿನದ ಪ್ರಯುಕ್ತ ಬಡವರಿಗೆ ಆಹಾರ ಪದಾರ್ಥದ ಕಿಟ್ ವಿತರಿಸುತ್ತಿರುವ ಶ್ಲಾಘನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರೇಣುಕಾ ಸರಡಗಿ, ಗೌರಮ್ಮಾ, ಮುಬೀನ್, ಆಮೀನ್, ಸದ್ದಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.