ಆಹಾರ ಸುರಕ್ಷತೆ: 12,500 ರು. ದಂಡ

| Published : Sep 02 2024, 02:01 AM IST

ಸಾರಾಂಶ

ಆಹಾರ ಸುರಕ್ಷತೆ: 12,500 ರು. ದಂಡ

ಕನ್ನಡಪ್ರಭ ವಾರ್ತೆ

ರಾಮನಗರ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಜಿಲ್ಲೆಯ ಮಾಗಡಿ ಹಾಗೂ ಕನಕಪುರ ತಾಲೂಕಿನಲ್ಲಿ ವಿವಿಧ ಹೋಟೆಲ್‌ಗಳು, ರೆಸ್ಟೋರೆಂಟ್, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಒಟ್ಟು 22 ಕಡೆ ದಾಳಿ ನಡೆಸಿ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು.

ಮಾಗಡಿಯ ಕಲ್ಯಾಗೇಟ್, ವ್ಮರೂರು ಹ್ಯಾಂಡ್‌ಪೋಸ್ಟ್ ಹಾಗೂ ಕನಕಪುರ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ 22 ಕಡೆ ದಾಳಿ ನಡೆಸಿ, ನಿಯಾಮವಳಿಯನ್ನು ಉಲ್ಲಂಘಿಸಿದವರಿಂದ ಒಟ್ಟಾರೆ 12,500 ರು. ದಂಡ ವಸೂಲಿ ಮಾಡಿದೆ.ಈ ಸಂದರ್ಭದಲ್ಲಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ಮಾಲೀಕರಿಗೆ ಆಹಾರ ಸುರಕ್ಷತೆಯ ಬಗ್ಗೆ ಹಾಗೂ ಎಫ್.ಎಸ್.ಎಸ್.ಎ ಕಾಯ್ದೆ 2006ರ ಪ್ರಕಾರ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ರೋಚನಾ, ಆಹಾರ ಸುರಕ್ಷತಾಧಿಕಾರಿಗಳಾದ ಡಾ. ಚಂದ್ರಶೇಖರ್ , ಕೆಂಪರಾಜು ಇದ್ದರು.