ಸಾರಾಂಶ
ಕಾಲುಬಾಯಿ ಜ್ವರದಿಂದ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಹಾಲಿನ ಇಳುವರಿ ಕುಂಠಿತವಾದರೆ, ಚರ್ಮಗಂಟುರೋಗವು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುಜಾಂಗ್ರತಾ ಕ್ರಮ ಮತ್ತು ಕೊಟ್ಟಿಗೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಲಸಿಕೆ ಹಾಕಿಸಬೇಕು.
ಕುಷ್ಟಗಿ:
ಜಾನುವಾರುಗಳಿಗೆ ಕಾಲುಬಾಯಿ ಹಾಗೂ ಚರ್ಮಗಂಟು ರೋಗ ಸೇರಿದಂತೆ ವಿವಿಧ ರೋಗಗಳಿಂದ ರಕ್ಷಿಸಲು ಶುಕ್ರವಾರದಿಂದ ಪಶು ಸಂಗೋಪನೆ ಇಲಾಖೆ ಲಸಿಕಾ ಅಭಿಯಾನ ಪ್ರಾರಂಭಿಸಿದೆ.ಪಟ್ಟಣ ಸೇರಿದಂತೆ ತಾಲೂಕಿನ ಪಶು ಚಿಕಿತ್ಸಾಲಯ ಹಾಗೂ ಕ್ಯಾಂಪ್ ಮಾಡುವ ಮೂಲಕವಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ 7ನೇ ಸುತ್ತಿನ ಲಸಿಕಾ ಅಭಿಯಾನ ಆರಂಭಿಸಿದೆ. ತಾಲೂಕಿನ 73,325 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಕಾಲುಬಾಯಿ ಜ್ವರದಿಂದ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಹಾಲಿನ ಇಳುವರಿ ಕುಂಠಿತವಾದರೆ, ಚರ್ಮಗಂಟುರೋಗವು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುಜಾಂಗ್ರತಾ ಕ್ರಮ ಮತ್ತು ಕೊಟ್ಟಿಗೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಲಸಿಕೆ ಹಾಕಿಸಬೇಕು. ಈ ಅಭಿಯಾನವು ಏ.26ರಿಂದ ಜೂನ್ 9ರ ವರೆಗೆ ನಡೆಯಲಿದೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ತಾಲೂಕಿನ ಕಂದಕೂರು ಗ್ರಾಮದಲ್ಲಿ ಸಮಾಜ ಸೇವಕ ರವಿಕುಮಾರ ಹಿರೇಮಠ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಕಂದಕೂರಪ್ಪ ವಾಲ್ಮೀಕಿ, ಗ್ರಾಪಂ ಅಧ್ಯಕ್ಷ ದುರಗಮ್ಮ ಹಾದಿಮನಿ, ಸಿಬ್ಬಂದಿಗಳಾದ ಸಂಗಪ್ಪ, ಪ್ರವೀಣ,ಸೌಮ್ಯ, ವೀರೇಶ, ಕರಿಂಸಾಬ, ಉಮೇಶ, ಶರಣಪ್ಪ, ನಿರ್ಮಲಾ, ಗಂಗಮ್ಮ, ರೈತರು ಭಾಗವಹಿಸಿದ್ದರು.ಕುಷ್ಟಗಿ ತಾಲೂಕಿನಲ್ಲಿ 73 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗಗಳಿಂದ ರಕ್ಷಿಸಬೇಕು.
ಡಾ. ಆನಂದ ದೇವರನಾವದಗಿ ಸಹಾಯಕ ನಿರ್ದೇಶಕರು ಪಶು ಇಲಾಖೆ ಕುಷ್ಟಗಿಪಶು ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಕಾಲುಬಾಯಿ ಹಾಗೂ ಚರ್ಮಗಂಟು ರೋಗದ ವಿರುದ್ಧ ಜೂ.9ರ ವರೆಗೆ ಉಚಿತವಾಗಿ ಲಸಿಕೆ ಹಾಕಲಿದ್ದಾರೆ.
ಡಾ. ಸಿದ್ದಲಿಂಗಯ್ಯ ಶಂಕಿನ್ ಹಿರಿಯ ಪಶು ವೈದ್ಯಾಧಿಕಾರಿ ಕುಷ್ಟಗಿ