ರಕ್ತ ಸಂಚಾರಕ್ಕೆ ಫುಟ್ ಪಲ್ಸ್ ಥೆರಪಿ ಪೂರಕ: ಅರುಣ್‌ಕುಮಾರ್‌

| Published : Jan 30 2024, 02:03 AM IST

ರಕ್ತ ಸಂಚಾರಕ್ಕೆ ಫುಟ್ ಪಲ್ಸ್ ಥೆರಪಿ ಪೂರಕ: ಅರುಣ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ರಕ್ತ ಪರಿಚಲನೆ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲಿಕ ಸಮಸ್ಯೆಗಳ ಪರಿಹಾರಕ್ಕೆ ಫುಟ್ ಪಲ್ಸ್ ಥೆರಪಿ ಚಿಕಿತ್ಸೆ ಸಹಕಾರಿ ಎಂದು ಹೊಸಕೋಟೆ ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ಹೊಸಕೋಟೆ: ರಕ್ತ ಪರಿಚಲನೆ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲಿಕ ಸಮಸ್ಯೆಗಳ ಪರಿಹಾರಕ್ಕೆ ಫುಟ್ ಪಲ್ಸ್ ಥೆರಪಿ ಚಿಕಿತ್ಸೆ ಸಹಕಾರಿ ಎಂದು ಹೊಸಕೋಟೆ ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ನಗರದ ವಕೀಲರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ೧೩ ದಿನಗಳ ಫುಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ. ಕೇವಲ ೧೫ ದಿನಗಳ ಚಿಕಿತ್ಸೆ ಪಡೆದರೆ ಶುಗರ್, ಬಿಪಿ, ಸ್ನಾಯು ಸೆಳೆತ, ಸಂಧಿವಾತ, ನಿದ್ರಾಹೀನತೆ, ಬೆನ್ನು ನೋವು, ಮಂಡಿ ನೋವು, ಪಾಶ್ವ ವಾಯು, ಥೈರಾಯ್ಡ್ ಸೇರಿ ಇನ್ನಿತರ ನರಗಳಿಗೆ ಸಂಬಂಧಿಸಿದ ಹಲವು ರೋಗಗಳಿಂದ ಗುಣಮುಖರಾಗಬಹುದು ಎಂದರು.

ಅರ್ಧ ತಾಸು ಚಿಕಿತ್ಸೆ ಪಡೆದರೆ ೫ ಕಿ.ಮೀ.ವರೆಗೆ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಈ ಚಿಕಿತ್ಸೆ ಸಹಕಾರಿಯಾಗುತ್ತದೆ ನರ ರೋಗಗಳಿಗೆ ಸಂಬಂಧಿಸಿದ ಸಣ್ಣ ಮತ್ತು ದೀರ್ಘಕಾಲಿಕ ಸಮಸ್ಯೆಗಳನ್ನ ಔಷಧ ರಹಿತವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಪ್ರತಿಯೊಬ್ಬರು ಉಚಿತವಾಗಿ ಚಿಕಿತ್ಸೆ ಪಡೆಯುವುದರ ಮೂಲಕ ಆರೋಗ್ಯದ ಸ್ಥಿರತೆ ಕಾಪಾಡಿಕೊಳ್ಳಿ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ವಕೀಲರು ಸಹ ದಿನನಿತ್ಯ ಒತ್ತಡದ ನಡುವೆ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಹಲವಾರು ರೀತಿಯ ದೈಹಿಕ ಹಾಗೂ ನರ ಸಂಬಂಧಿತ ರೋಗಗಳನ್ನ ಎದುರಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ವತಿಯಿಂದ ೧೩ ದಿನಗಳ ಈ ಶಿಬಿರವನ್ನು ಉಚಿತವಾಗಿ ಆಯೋಜನೆ ಮಾಡಲಾಗಿದೆ. ವಕೀಲರು ಸೇರಿದಂತೆ ಕುಟುಂಬದ ಸದಸ್ಯರು ಕೂಡ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸಕೋಟೆ ಜೆಎಂಎಫ್‌ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ ಜಿ ಸನದಿ, ಅಪರ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ ಕುಲಕರ್ಣಿ, ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂವಿ.ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜ, ಖಜಾಂಚಿ ರವಿಕುಮಾರ್, ನಿರ್ದೇಶಕರಾದ ಶಿವರಾಮೇಗೌಡ, ರವಿ, ಕೃಷ್ಣಪ್ಪ, ದೀಪಕ್, ಆನಂದ್, ಜಯಲಕ್ಷ್ಮಮ್ಮ, ನರಸಿಂಹಯ್ಯ ಇತರರು ಹಾಜರಿದ್ದರು.ಫೋಟೋ : ೨೯ ಹೆಚ್‌ಎಸ್‌ಕೆ ೧

ಹೊಸಕೋಟೆ ವಕೀಲರ ಸಂಘದ ಆವರಣದಲ್ಲಿ ಫುಟ್ ಪಲ್ಸ್ ಥೆರಪಿ ಶಿಬಿರಕ್ಕೆ ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಚಾಲನೆ ನೀಡಿದರು.