ರೈತನ ಹೆಣ್ಣು ಮಕ್ಕಳನ್ನು ಕೃಷಿ ಮಾಡುವವನಿಗೆ ಕೊಡಬೇಕು

| Published : Jan 30 2024, 02:03 AM IST

ರೈತನ ಹೆಣ್ಣು ಮಕ್ಕಳನ್ನು ಕೃಷಿ ಮಾಡುವವನಿಗೆ ಕೊಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕೂಡ ಹಾಳಾಗುತ್ತಿದೆ. ಆದ್ದರಿಂದ ಎಲ್ಲರೂ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಉತ್ತಮ.

ಕನ್ನಡಪ್ರಭ ವಾರ್ತೆ ಐಗಳಿ

ಶೃದ್ಧೆ, ನಂಬಿಕೆಯಿಂದ ಕಾಯಕ ಮಾಡಿದರೆ ಭೂತಾಯಿ ನಿಮಗೆ ಹೊಟ್ಟೆ ತುಂಬುವಂತೆ ನೀಡುತ್ತಾಳೆ. ಮಣ್ಣಿನ ಫಲವತ್ತತೆ ಕಾಯುವದು ನಿಮ್ಮ ಕೈಯಲ್ಲಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕಲ್ಮೇಶ ಯಲಡಗಿ ಹೇಳಿದರು. ಅವರು ಮಾಜಿ ಕುಸ್ತಿ ಪಟು ಲಿಂ.ನಿಂಗಪ್ಪ ಅಜ್ಜರ ಪುಣ್ಯಸ್ಮರಣೆ ಅಂಗವಾಗಿ ನಡೆದ ನಮ್ಮ ನಡೆ ಸಾವಯವ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ರಾಸಾಯನಿಕ ಗೊಬ್ಬರ, ಔಷಧಿ ಬಳಸಿ ಕೃಷಿ ಮಾಡಲಾಗುತ್ತಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕೂಡ ಹಾಳಾಗುತ್ತಿದೆ. ಆದ್ದರಿಂದ ಎಲ್ಲರೂ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.ಸಾವಯವ ಕೃಷಿ ವಿದ್ಯಾಪೀಠ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಕೃಷಿಕರು ರಾಜಕೀಯದಿಂದ ದೂರ ಇರಬೇಕು. ರೈತನ ಹೆಣ್ಣು ಮಕ್ಕಳನ್ನು ಕೃಷಿ ಮಾಡುವವನಿಗೆ ಕೊಡಬೇಕು. ನಾವು ರೈತರು ದೇಶಕ್ಕೆ ಅನ್ನ ಕೊಡುವ ಅನ್ನದಾತರು. ಸಾವಯುವ ಕೃಷಿ ಪದ್ದತಿ ಅಳವಡಿಸಿ. ಕೃಷಿ ಜೊತೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಿ ಎಂದರು.ಮಲ್ಲಿಕಾರ್ಜುನ ಸಿಂಧೂರ ಸಿಪಿಐ ದಂಪತಿಗಳು ಗದ್ದುಗೆ ಪೂಜೆ ನೆರವೇರಿಸಿದರು. ಲೋಕಾಪುರದ ಪೂಜ್ಯ ಡಾ. ಚಂದ್ರಶೇಖರ ಸ್ವಾಮೀಜಿ, ಭೂಕೈಲಾಸದ ಮಹಾದೇವ ಮಹಾರಾಜರು ಆಶೀರ್ವಚನ ನೀಡಿದರು. ಪ್ರತಿಭಾ ಪುರಸ್ಕಾರ ಸನಾ ಶಬ್ಬಿರ ಮುಜಾವರ, ಆನಂದ, ರವೀಂದ್ರ, ಹಾಲಳ್ಳಿ, ಸಂಕೇಶ ಯಲ್ಲಪ್ಪ ಮಿರ್ಜಿ, ಇವರಿಗೆ ಗೌರವಿಸಿದರು. ಕೆಎಎಸ್ ಅಧಿಕಾರಿ ಕೋಹಳ್ಳಿಯ ಮಲಗೌಡ ಝರೆ ಇವರನ್ನು ಸಿಂಧೂರ ದಂಪತಿಗಳು ಹಾಗೂ ಪೂಜ್ಯರು ಸನ್ಮಾನಿಸಿದರು. ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಗಜಾನನ ಮಂಗಸೂಳಿ, ಬಸವರಾಜ ಬುಟಾಳೆ, ಕಕಮರಿ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಅಪ್ಪುಗೌಡ ಪಾಟೀಲ, ಸಿ.ಎಸ್. ನೇಮಗೌಡ, ಉತ್ತಮ ಅಭಿಯಂತರ ಪ್ರಶಸ್ತಿ ಪುರಸ್ಕೃತ ರಾಜಶೇಖರ ಟೋಪಗಿ, ಮಹಾದೇವ ಹಾಲಳ್ಳಿ, ಕಲ್ಮೇಶ ಆಸಂಗಿ, ಗ್ರಾ.ಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಡಾ. ರವಿ ಸಂಕ, ರಾವಸಾಬ ಪಾಟೀಲ, ಡಾ. ಎಸ್.ಆರ್‌. ಬಾಲಪ್ಪನವರ, ಶಂಕರ ಪೂಜಾರಿ, ಅವಿನಾಶ ನಾಯಿಕ, ಪಿಎಸ್‌ಐ ಸುಮಲತಾ ಆಸಂಗಿ, ಧರೆಪ್ಪ ಠಕ್ಕನ್ನವರ, ಹಿರಿಯ ಪತ್ರಕರ್ತೆ ಅಶ್ವಿನಿ ಯಾದವಾಡ ಹಾಗೂ ಮಲಗೌಡ ಪಾಟೀಲ ಇದ್ದರು.