ಸದೃಢ ದೇಹಕ್ಕೆ ಕ್ರೀಡೆಗಳಲ್ಲಿ ಭಾವಹಿಸಿ: ಗರಡಿ ಕುಸ್ತಿ ಸಂಘದ ರಮೇಶ

| Published : Oct 04 2025, 01:00 AM IST

ಸದೃಢ ದೇಹಕ್ಕೆ ಕ್ರೀಡೆಗಳಲ್ಲಿ ಭಾವಹಿಸಿ: ಗರಡಿ ಕುಸ್ತಿ ಸಂಘದ ರಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷ ಟಿ.ಎಸ್.ರಮೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಕ್ರೀಡೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷ ಟಿ.ಎಸ್.ರಮೇಶ್ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ತರೀಕೆರೆ, ಪುರಸಭೆ ತರೀಕೆರೆ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು ಮತ್ತು ಎಲ್ಲಾ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಊರಿಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕು, ತರೀಕೆರೆ ಕುಸ್ತಿ ಸ್ಪರ್ಧೆಗಳು ನೂರು ವರ್ಷದ ಇತಿಹಾಸವನ್ನು ಹೊಂದಿದೆ, ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ. ದಾನಿಗಳು, ಪುರಸಭೆ, ಎಲ್ಲಾ ಇಲಾಖೆಗಳು ಸಹಕರಿಸಿವೆ ಎಂದರು.

ಖ್ಯಾತ ಮೂಳೆ ತಜ್ಞ ಡಾ.ಟಿ.ಎಂ.ದೇವರಾಜ್ ಮಾತನಾಡಿ, ಕಾರ್ಯಕ್ರಮ ಅತ್ಯುತ್ತಮವಾಗಿ ಆಯೋಜನೆಗೊಂಡಿದೆ. ಶ್ರೀ ಗುರು ರೇವಣಸಿದ್ದೇಶ್ವರನ ಆಶೀರ್ವಾದ ಇದೆ, ಯಶಸ್ಸು ದೊರೆಯುತ್ತಿದೆ. ವಿಶೇಷ ಸಾಧನೆಯನ್ನು ಮಾಡಬೇಕು, ಆರೋಗ್ಯವಂತ ದೇಹವನ್ನು ಬೆಳೆಸಿಕೊಳ್ಳಬೇಕು, ಕುಸ್ತಿಯಲ್ಲಿ ಏಕಾಗ್ರತೆ ಬಹಳ ಅಗತ್ಯ ಎಂದು ಹೇಳಿದರು.

ಮೈಸೂರು ಬಿಟ್ಟರೆ ತರೀಕೆರೆ ಕುಸ್ತಿ ಸ್ಪರ್ದೆಗಳಿಗೆ ಹೆಸರುವಾಸಿಯಾಗಿದೆ, ಕುಸ್ತಿಯು ದೇಶೀಯ ಕ್ರೀಡೆ ಹೆಚ್ಚು ಹೆಚ್ಚು ಬೆಳೆಯಲಿ, ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು,.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಪಾರಂಪರಿಕವಾಗಿ ಐತಿಹಾಸಿಕವಾಗಿ ಕುಸ್ತಿಸ್ಪರ್ಧೆಗಳು ನೆಡೆದು ತರೀಕೆರೆ ರಾಷ್ಟ್ರದಲ್ಲಿ ಒಳ್ಳೆಯ ಹೆಸರು ಪಡೆದಿದೆ. ಅನೂಚಾನವಾಗಿ ಕುಸ್ತಿ ಸ್ಪರ್ಧೆ ಸಮಾರಂಭ ನಡೆದುಕೊಂಡು ಬರುತ್ತಿದೆ, ಗರಡಿ ಮನೆಗಳು ಪುನಶ್ಚೇತನಗೊಳ್ಳಬೇಕು. ಅದಕ್ಕೆ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಪುರಸಭಾ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ರಾಜ ಮಹಾರಾಜರು ಕುಸ್ತಿ ಪಟುಗಳನ್ನು ರಕ್ಷಣೆ ಮಾಡಿದರು, ತರೀಕೆರೆ ಕುಸ್ತಿಸ್ಪರ್ಧೆಗಳು ರಾಜ್ಯ ಅಂತಾರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ತರೀಕೆರೆ ಕುಸ್ತಿ ಸೊಬಗನ್ನು ಉಳಿಸಿಕೊಂಡು ಬಂದಿದೆ, ಸರ್ವರ ಸಹಕಾರದಿಂದ ಕುಸ್ತಿ ಸ್ಪರ್ಧೆ ಸಮಾರಂಭ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಗೌರವಾಧ್ಯಕ್ಷ ಎಂ.ಮಂಜುನಾಥ್ (ವಗ್ಗಪ್ಪರ), ಪುರಸಭೆ ಅಧ್ಯಕ್ಷ ವಸಂತಕುಮಾರ್, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಉಪಾಧ್ಯಕ್ಷ ಟಿ.ಡಿ.ರವಿಕುಮಾರ್, ಖಚಾಂಚಿ ಟಿ.ಎನ್.ಸೋಮಶೇಖರಯ್ಯ, ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಟು ಅನುಷ ಗಂಗಾಧರ್ ಮಾತನಾಡಿದರು.

ಪುರಸಭೆ ಸದಸ್ಯರಾದ ಟಿ.ಜಿ.ಶಶಾಂಕ, ಟಿ.ಎಸ್.ಚೇತನ್, ಮಂಜುನಾಥ್, ಟಿ.ಜಿ.ಹರೀಶ್, ಟಿ.ಸಿ.ದರ್ಶನ್, ಎಸ್.ರವಿ, ಶ್ರೀಧರ್, ಜಯಸ್ವಾಮಿ ಕಾರೆ, ಸುಜೀತ್ ಗುರುದೇವ್, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಪದಾದಿಕಾರಿಗಳು, ಸದಸ್ಯರು ಮತ್ತಿತರರು ಭಾಗವಹಿಸಿದ್ದರು.