ಸಾರಾಂಶ
ಸಮಾಜಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಮನೆಗಳಿಗೂ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಸಿ
ಕನ್ನಡಪ್ರಭ ವಾರ್ತೆ ಮೈಸೂರು
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿದ್ದು, ಕಡ್ಡಾಯವಾಗಿ ಎಲ್ಲಾ ಮನೆಯವರು ಪ್ಲಾಸ್ಟಿಕ್ ಮುಕ್ತ ಮಾಡಲು ಸಹಕಾರ ನೀಡಲು ಪ್ರತಿ ಮನೆಗಳಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸುವ ಕಾರ್ಯಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು.ಕುವೆಂಪುನಗರದ ಭಾಗದಲ್ಲಿ ಬಟ್ಟೆ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಸಮಾಜಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಮನೆಗಳಿಗೂ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಸಿ, ಈ ಅಭಿಯಾನಕ್ಕೆ ಸಹಕಾರ ಕೋರಿದರು.
ವಲಯ ಆಯುಕ್ತ ಸತ್ಯಮೂರ್ತಿ, ಪರಿಸರ ವಲಯ ಅಧಿಕಾರಿ ಅರ್ಪಿತಾ, ಎಂಜಿನಿಯರ್ ಮಣಿ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಸಿ. ರಮೇಶ್, ಮುಖಂಡರಾದ ಜೋಗಿ ಮಂಜು, ಮನೋಜ್, ನಾಗೇಂದ್ರ, ರಾಜೇಶ್, ಹೇಮಂತ, ಪ್ರಸಾದ್, ರವಿ, ಛಾಯಾ, ಪ್ರದೀಪ್, ಕಿಶೋರ್, ಆದಿತ್ಯ, ಗೋವಿಂದ, ವಸಂತ ಮೊದಲಾದವರು ಇದ್ದರು.