ನೊಂದಾಯಿತ ಕಾರ್ಮಿಕರಿಗೆ ಪೌಷ್ಟಿಕ ಕಿಟ್ ವಿತರಣೆ

| Published : Jul 17 2024, 12:49 AM IST

ಸಾರಾಂಶ

ಕಿಟ್ ನಲ್ಲಿರುವ ಪೌಷ್ಟಿಕತೆ ವಸ್ತುಗಳು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ,

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಸರ್ಕಾರದಿಂದ ನೋಂದಾಯಿತ ಕಾರ್ಮಿಕರಿಗೆ ಪೌಷ್ಟಿಕ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ, ಇದು ಸಂಪೂರ್ಣ ಆಯುರ್ವೇದದ ನ್ಯೂಟ್ರಿಷಿಯನ್ ಕಿಟ್ ಗಳಾಗಿದ್ದು, ಫಲಾನುಭವಿಗಳು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪಿರಿಯಾಪಟ್ಟಣ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಬ್ಬೀರ್ ಖಾನ್ ಹೇಳಿದರು.

ತಾಲೂಕಿನ ಬೈಲಕುಪ್ಪೆಯ ದೊಡ್ಡ ಹೊನ್ನೂರು ಗೇಟ್ ಬಳಿ, ಪಿರಿಯಾಪಟ್ಟಣ ತಾಲೂಕು ಕಟ್ಟಡ ಕಾರ್ಮಿಕ ಮಜ್ದೂರ್ ಸಂಘ, ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘ ಬೈಲಕುಪ್ಪೆ, ಜಂಟಿ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜದೂರ್ ಸಂಘದ ಕಾರ್ಯದರ್ಶಿ ಮನುಕುಮಾರ್ ಮಾತನಾಡಿ, ಈ ಕಿಟ್ ನಲ್ಲಿರುವ ಪೌಷ್ಟಿಕತೆ ವಸ್ತುಗಳು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಹಾಗಾಗಿ ಎಲ್ಲರೂ ಇದನ್ನು ಬಳಸಿ ಆರೋಗ್ಯವಾಗಿರಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುಮಾರು 65 ಜನ ಮಹಿಳೆಯರಿಗೆ ಸಂಘದ ಪದಾಧಿಕಾರಿಗಳು ಕಿಟ್ ವಿತರಣೆ ಮಾಡಿದರು. ನಟರಾಜ್, ಶಶಿಧರ್, ಶೇಖರ್, ರಾಜೇಶ್, ಕುಮಾರ್ ಇದ್ದರು.