ಸಾರಾಂಶ
35 ರಿಂದ 40, 50 ರಿಂದ 70 ಹಾಗೂ 90 ವರ್ಷ ವಯಸ್ಸಿನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಕಳೆದ ಮೂರು ದಿನಗಳಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 44ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ.ಕರ್ನಾಟಕ, ತಮಿಳುನಾಡು, ಕೇರಳ, ಹರಿಯಾಣ, ದೆಹಲಿ, ಚಂಡಿಗಡ, ಹಿಮಾಚಲ ಪ್ರದೇಶ, ಚತ್ತಿಸ್ ಗಡ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಾಂಡಿಚೆರಿ, ರಾಜಸ್ಥಾನ ರಾಜ್ಯಗಳಿಂದ 1,600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದವು.
35 ರಿಂದ 40, 50 ರಿಂದ 70 ಹಾಗೂ 90 ವರ್ಷ ವಯಸ್ಸಿನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಆರಂಭದಲ್ಲಿ 5 ಸಾವಿರ ಮೀಟರ್ ವಾಕ್ ಥ್ರೂ ಆಟದಲ್ಲಿ ತಮಿಳುನಾಡಿನ ಸುರೇಶ್ - ಪ್ರಥಮ, ಡಿ ತುಳಿಸಿರಾಮನ್- ದ್ವಿತೀಯ, ಕರ್ನಾಟಕದ ದಿನೇಶ್ ಆಚಾರ್ಯ ಪದಕ ಗಳಿಸಿದರು.ಜಾವಲಿನ್ ಥ್ರೋ ಬರ್ಚಿ ಎಸೆತದಲ್ಲಿ ಕರ್ನಾಟಕದ ಸ್ವಾತಿ ಕೆ. ರವಿ - ಪ್ರಥಮ, ತಮಿಳುನಾಡಿನ ಕೆ. ಸುಹಾತ- ದ್ವಿತೀಯ, ಜಿ. ರೋಸ್ ಸ್ವೀಟಿ - ತೃತೀಯ ಪದಕ ಗಳಿಸಿದರು.
ಚಕ್ರ ಎಸೆತ - ಕರ್ನಾಟಕ ಸರಸ್ವತಿ- ಪ್ರಥಮ, ಲಾನ್ಸಿ ಜಾನ್- ದ್ವಿತೀಯ, ಭಾರತಿ ತೃತೀಯ ಪದಕ ಗಳಿಸಿದರು.4x400 ಮೀಟರ್ ಓಟ ಸ್ಪರ್ಧೆಯಲ್ಲಿ ತಮಿಳುನಾಡು ಎನ್. ಆನಂದ - ಪ್ರಥಮ ಕರ್ನಾಟಕ ರಾಘವ್ ಎನ್. ದ್ವಿತೀಯ, ತಮಿಳಿನಲ್ಲಿ ಮಿಟ್ಟಿಲ್ ಗಣೇಶ್ - ತೃತೀಯ ಪದಕ ಗಳಿಸಿದರು.
ತ್ರಿವಿದ ಜೀಗಿತ ಸ್ಪರ್ಧೆಯಲ್ಲಿ ಪಂಜಾಬ್ ಗುರ್ತೆಜ್ ಸಿಂಗ್, ಪ್ರಥಮ, ಕೇರಳದ ಅಭಿಜಿತ್ ದ್ವಿತೀಯ, ತಮಿಳುನಾಡಿನ ಈ. ಕುರುಪ್ಪಯ್ಯ, ತೃತೀಯ ಪದಕ ಗಳಿಸಿದರು.ಬಹುತೇಕ ಪ್ರಶಸ್ತಿಗಳು ತಮಿಳುನಾಡು ಹಾಗೂ ಕರ್ನಾಟಕ ಪಾಲಾಗಿದೆ. ಗೆದ್ದ ಅಭ್ಯರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು. ಒಟ್ಟಾರೆ ಮೂರು ದಿನಗಳ ರಾಷ್ಟ್ರೀಯ ಹಿರಿಯರ ಕ್ರೀಡಾ ಕೂಟಕ್ಕೆ ತೆರೆಕಂಡಿತು.
ವೆಟರನ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಎಂ.ಆರ್. ರಂಗನಾಥ್, ಕಾರ್ಯದರ್ಶಿ ಜಿ. ರಾಮಮೂರ್ತಿ, ಸಹ ಕಾರ್ಯದರ್ಶಿ ವೇಣುಗೋಪಾಲ್, ರಘನಾಥನಾಯ್ಡು, ಎ.ಕೆ. ಆಶೋಕನ್, ಜಿ. ಶ್ರೀಕಲಾ, ಗುರ್ ದಿಲ್ ಸಿಂಗ್, ಸೈನಿ, ಕ್ರೀಡಾಪಟುಗಳು ಇದ್ದರು.----------------