ಜಾನುವಾರುಗಳ ಕಾಲು ಕತ್ತರಿಸಿದವನ ಗಡಿಪಾರಿಗೆ ಒತ್ತಾಯ

| Published : Mar 23 2024, 01:29 AM IST

ಸಾರಾಂಶ

ಜಾನುವಾರುಗಳ ಕಾಲು ಕತ್ತರಿಸಿ ನಾಗರಿಕರಿಗೆ ಆತಂಕ ಉಂಟು ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಜಾನುವಾರುಗಳ ಕಾಲು ಕತ್ತರಿಸಿ ನಾಗರಿಕರಿಗೆ ಆತಂಕ ಉಂಟು ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದರು. ತಾಲೂಕಿನ ಗುಂಡಿಮಾಳ ಗ್ರಾಮದ ರೈತರ ಹದಿನಾರು ಜಾನುವಾರಗಳ ಕಾಲು ಕತ್ತರಿಸಿ ರಾಜರೋಷವಾಗಿ ಓಡಾಡುತ್ತಿರುವ ವ್ಯಕ್ತಿಯನ್ನು ಪೊಲೀಸರು ಗಡಿಪಾರು ಮಾಡುವಂತೆ ಒಡೆಯರ್ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಮಾತನಾಡಿದರು.ಅನ್ಯ ಧರ್ಮೀಯ ವ್ಯಕ್ತಿ ಓರ್ವ ಗುಂಡಿಮಾಳ ಗ್ರಾಮದ ರೈತರ ಹದಿನಾರು ಜಾನುವಾರುಗಳ ಮೇಲೆ ಮಚ್ಚಿನಿಂದ ಕಾಲುಗಳನ್ನು ಕತ್ತರಿಸಿ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕಾಟಾಚಾರಕ್ಕೆ ಬಂಧಿಸಿ ಬಿಟ್ಟಿರುವುದರಿಂದ ಜಾಮೀನಿನ ಮೇಲೆ ಬಂದು ರೈತರಿಗೆ ಭಯದ ವಾತಾವರಣವನ್ನು ಉಂಟು ಮಾಡಿದ್ದಾನೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಜಾನುವಾರು ಕಾಲು ಕತ್ತರಿಸಿದ ವ್ಯಕ್ತಿಯನ್ನು ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದರು.ಸರ್ಕಾರವೇ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು, ರೈತರಿಗಾಗಿರುವ ನಷ್ಟ ಪರಿಹರಿಸಿ, ಈ ಭಾಗದಲ್ಲಿ ಕನ್ನಡ ನಾಮಫಲಕವಿಲ್ಲದೆ ಎಲ್ಲಿ ನೋಡಿದರೂ ಆಂಗ್ಲ ಮಾಧ್ಯಮ ಮತ್ತು ಬೇರೆ ಭಾಷೆಯ ನಾಮಪಲಕಗಳು ಹೆಚ್ಚಾಗಿದ್ದು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾಡಳಿತ ಇಲ್ಲದಿದ್ದರೆ ಸೋಮವಾರ ತಮಿಳುನಾಡಿನ ಅಂತರ್ ರಾಜ್ಯ ರಸ್ತೆ ತಡೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನುರ್ ಪ್ರಕಾಶ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಒಡೆಯರ್ ಪಾಳ್ಯ ಶಿವು ಮಂಜು ಲೋಕ್ಕನಹಳ್ಳಿ ಗ್ರಾಮದ ನವೀನ್ ಮನೋಹರ್ ವೇಲು ಗುಂಡಿಮಾಳ ಗ್ರಾಮದ ರೈತ ಪ್ರಸಾದ್ ಇದ್ದರು.