ಶಿಕ್ಷಕರಿಗೆ ಪಿಂಚಣಿ ಯೋಜನೆಗೆ ಒಳಪಡಿಸಲು ಒತ್ತಾಯ

| Published : Apr 01 2024, 12:49 AM IST

ಸಾರಾಂಶ

ಅರ್ಜಿ ಸ್ವೀಕರಿಸಿದ ಬಿಇಒ ಮೈಲೇಶ್ ಬೇವೂರ್ ಪ್ರತಿಕ್ರಿಯಿಸಿ, ಶಿಕ್ಷಕರ ಸೇವಾ ವಿವಿರಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಸರಿಪಡಿಸಲು ಸೂಚಿಸಲಾಗುವುದು.

ಹಗರಿಬೊಮ್ಮನಹಳ್ಳಿ:

ತಾಲೂಕಿನ ೨೬ ಶಿಕ್ಷಕರು ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲು ಒತ್ತಾಯಿಸಿ ಅಭಿಮತ ಅರ್ಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿದರು.

ಅರ್ಜಿ ಸ್ವೀಕರಿಸಿದ ಬಿಇಒ ಮೈಲೇಶ್ ಬೇವೂರ್ ಪ್ರತಿಕ್ರಿಯಿಸಿ, ಶಿಕ್ಷಕರ ಸೇವಾ ವಿವಿರಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಸರಿಪಡಿಸಲು ಸೂಚಿಸಲಾಗುವುದು. ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಾಗಿದೆ. ಶಿಕ್ಷಕರ ಕಚೇರಿಯ ಕೆಲಸಗಳನ್ನು ಸಮರ್ಪಕವಾಗಿ ಮಾಡಿದಾಗ, ಶಾಲೆಯಲ್ಲಿ ಉತ್ತಮ ಬೋಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಲೋಕಪ್ಪ, ತಾಲೂಕು ಎನ್‌ಪಿಎಸ್ ಸಂಘದ ಅಧ್ಯಕ್ಷ ಎಸ್.ಆಂಜನೇಯ, ಕಾರ್ಯದರ್ಶಿ ಬಿ.ಕೊಟ್ರಪ್ಪ, ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಹೇಮಂತಕುಮಾರ್, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ದೀಪಿಕಾ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತವೀರನಗೌಡ, ಶಿಕ್ಷಕರ ಪ್ರತಿಭಾ ಪರಿಷತ್ತ್ನ ಸೋಮನಗೌಡ, ಸರ್ಕಾರಿ ನೌಕರರ ಒಕ್ಕೂಟದ ರಂಗನಾಥ್ ಹವಾಲ್ದಾರ್, ಶಿಕ್ಷಕರ ಸಂಘದ ದಾದೀಬಿ, ಕೆ.ಎಂ. ನಿರ್ಮಲ, ಶಾಂತಕುಮಾರಿ, ಇಟಗಿ ಮಂಜುನಾಥ್, ಇಟಗಿ ಪ್ರಭಾಕರ, ವಿಶೇಷ ಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರೀಶ್, ರುದ್ರೇಶ್ ಚಿನಿವಾಲರ, ಕೊಟ್ರೇಶ್ ಹರಾಳು ಇತರರಿದ್ದರು.