ಸಾರಾಂಶ
ಸ್ಥಳೀಯರಿಗೆ ಹಾಗೂ ರೈತರು ಸಂಚರಿಸಲು ಸರ್ವಿಸ್ ರಸ್ತೆ ನಿರ್ಮಾಣ ಮಾಡದ ಟೋಲ್ ನಾಕಾ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ಯುವ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ಥಳೀಯರಿಗೆ ಹಾಗೂ ರೈತರು ಸಂಚರಿಸಲು ಸರ್ವಿಸ್ ರಸ್ತೆ ನಿರ್ಮಾಣ ಮಾಡದ ಟೋಲ್ ನಾಕಾ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ಯುವ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು ಟೂಲ್ ನಾಕಾ ವಿರುದ್ಧ ಘೋಷಣೆ ಕೂಗಿದರು. ಹಿರೇಬಾಗೇವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಶೋಕ್ ಟೋಲ್ ನಾಕಾದ ಎರಡು ಬದಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿದೆ. ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೆ ಹಲವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಅಶೋಕ್ ಟೋಲ್ ವಿರುದ್ಧ ಕ್ರಮ ಕೈಗೊಂಡು ಹಿರೇಬಾಗೇವಾಡಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಬಸವರಾಜ ಕುರಬೇಟ, ಸುನೀಲ್ ಎಂ.ಎಸ್, ಡಾ.ಮಹಾಂತೇಶ್ ಕೂಲಿನವರು, ರಮೇಶ್ ಬಂಗಾರಿ, ಲೋಹಿತ ಉಮಾನಾಬಾದಿಮಠ, ವಿನೋದ ಗೋವಿಂದ ಜಾಧವ, ಜ್ಯೋತಿಭಾ ದರ್ವೇಶಿ, ಅಪ್ಪಣ್ಣಗೌಡ ಪಾಟೀಲ, ಉಮೇಶ ರೊಟ್ಟಿ ಇತರರಿದ್ದರು.
;Resize=(128,128))
;Resize=(128,128))