ಜಪಾನ್ ದೇಶದ ಅಂತಾರಾಷ್ಟ್ರೀಯ ಸಮುದಾಯ ಸೇವಾ ಕಾರ್‍ಯ (ಸಿಡಬ್ಲ್ಯುಸಿ)ಗಳ ಮುಖ್ಯಸ್ಥರಾದ ಪ್ರೊ. ಮಸಕಟೋಕಾ, ಕಾಂಬೋಡಿಯಾದ ಸಂಸ್ಕೃತಿ ಮತ್ತು ಕಲಾ ಮಂತ್ರಾಲಯದ ಸಹಾಯಕ ಸಚಿವ ಎಕ್ ಬುಂತಾ ಅವರು ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ: ಜಪಾನ್ ದೇಶದ ಅಂತಾರಾಷ್ಟ್ರೀಯ ಸಮುದಾಯ ಸೇವಾ ಕಾರ್‍ಯ (ಸಿಡಬ್ಲ್ಯುಸಿ)ಗಳ ಮುಖ್ಯಸ್ಥರಾದ ಪ್ರೊ. ಮಸಕಟೋಕಾ, ಕಾಂಬೋಡಿಯಾದ ಸಂಸ್ಕೃತಿ ಮತ್ತು ಕಲಾ ಮಂತ್ರಾಲಯದ ಸಹಾಯಕ ಸಚಿವ ಎಕ್ ಬುಂತಾ ಅವರು ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.ಸಿಡಬ್ಲ್ಯುಸಿ ಸಲಹೆಗಾರರಾದ ಮನೋರಮ ಭಟ್ ಉಜಿರೆ ಮತ್ತು ಶ್ರುತ ಕೀರ್ತಿ ಹಾಗೂ ಕಟೀಲು ಮೇಳದ ಕಲಾವಿದರು ಆಗಮಿಸಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ ಬಿ. ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ವಿ.ಜಿ. ಶೆಟ್ಟಿ, ಕೇಂದ್ರದ ಗುರುಗಳು, ವಿದ್ಯಾರ್ಥಿಗಳು ಅತಿಥಿಗಳನ್ನು ಬರ ಮಾಡಿಕೊಂಡು ಕೇಂದ್ರದ ಪರಿಚಯ ಮಾಡಿಕೊಟ್ಟರು.