ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರ ಕೆಎಸ್ಸಾರ್ಟಿಸಿ ಬಸ್‌ಘಟಕದ ವತಿಯಿಂದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಶಾಸಕ ಕೆ. ಹರೀಶ್‌ಗೌಡ ಉದ್ಘಾಟಿಸಿದರು.ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಲ್ಲಿ ಕನ್ನಡ ನಾಡಿನಾದ್ಯಂತ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ವಿಶ್ವದೆಲ್ಲೆಡೆ ಕನ್ನಡ ಭಾಷೆಗೆ ವಿಶಿಷ್ಟ ಸ್ಥಾನವಿದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದೇ ಇದಕ್ಕೆ ಹಿಡಿದ ಕೈಗನ್ನಡಿ. ಕನ್ನಡಿಗರು ಸ್ವಾಭಿಮಾನಿಗಳು, ಯಾರೇ ರಾಜ್ಯದ ಒಳಗಡೆ ಬದುಕು ನೆಡೆಸಲು ಬಂದರೆ ಪ್ರೀತಿಯಿಂದಲೇ ಸ್ವಾಗತಿಸಿ ಅಪ್ಪಿಕೊಂಡು ಒಪ್ಪಿಕೊಳ್ಳುತ್ತಾರೆ. ಎಲ್ಲಾ ಭಾಷಿಗರು, ಧರ್ಮೀಯರು, ಜಾತಿಯವರು ಬಂದರು ಯಾವ ಭೇದ ಭಾವ ತೋರದೆ ಸಮಾನವಾಗಿ ಕಾಣುತ್ತಾರೆ. ಆದರೆ ಅವರು ಸಹ ಕನ್ನಡವನ್ನು ಕಲಿತು ತಮ್ಮ ಜೀವನ ನೆಡೆಸಬೇಕು. ಬದಲಾಗಿ ಅವರ ಭಾಷೆಯನ್ನು ಕನ್ನಡಿಗರ ಮೇಲೆ ಏರಲು ಹೊರಟರೆ ಅದು ಈ ನೆಲಕ್ಕೆ ಮಾಡುವ ಅಪಮಾನವಾಗುತ್ತದೆ ಎಂದರು.ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವಿರೇಶ್, ಗ್ರಾಮಾಂತರ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಸಿ.ಎಸ್.ಆರ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಹಾಸ್, ಘಟಕ ವ್ಯವಸ್ಥಾಪಕ ಶ್ರೀನಿವಾಸ್, ಜವರೇಗೌಡ, ಕಿರಣ್, ಆನಂದ್ ಇದ್ದರು.