ಅರಣ್ಯ, ಜಲ ಸಂರಕ್ಷಣೆ ನಮ್ಮೇಲ್ಲರ ಹೊಣೆ

| Published : Mar 22 2025, 02:04 AM IST

ಅರಣ್ಯ, ಜಲ ಸಂರಕ್ಷಣೆ ನಮ್ಮೇಲ್ಲರ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಸಂದರ್ಭದಲ್ಲಿ ಪಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಗಿಡ ಮರಗಳಲ್ಲಿ ವ್ಯವಸ್ಥೆ ಮಾಡಬೇಕಿದೆ

ಹೂವಿನಹಡಗಲಿ: ಮುಂದಿನ ಯುವ ಪೀಳಿಗೆಗೆ ಅರಣ್ಯ ಮತ್ತು ಜಲದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಜತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾಲೇಜು ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್‌ ಹೇಳಿದರು.

ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಪಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅರಣ್ಯ ಸಂಪತ್ತನ್ನು ಮನುಷ್ಯ ತನ್ನಿಷ್ಟದಂತೆ ಬಳಕೆ ಮಾಡುತ್ತಿದ್ದಾನೆ.ಇದರಿಂದ ಸಾಕಷ್ಟು ಅರಣ್ಯ ನಾಶವಾಗುತ್ತಿದೆ. ಪ್ರತಿಯೊಬ್ಬರೂ ಮನೆ ಮುಂದೆ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಸಣ್ಣ ಕೊಡುಗೆ ನೀಡಬೇಕಿದೆ ಎಂದರು.

ಬೇಸಿಗೆ ಸಂದರ್ಭದಲ್ಲಿ ಪಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಗಿಡ ಮರಗಳಲ್ಲಿ ವ್ಯವಸ್ಥೆ ಮಾಡಬೇಕಿದೆ. ನಮ್ಮ ಮಕ್ಕಳಿಗೆ ಎಲ್ಲ ಪಾಣಿ, ಪಕ್ಷಿಗಳಲ್ಲಿ ಪಾಮುಖ್ಯತೆ ತಿಳಿಸಬೇಕು. ಈ ಹಿಂದೆ ರಾಜ ಮಹಾರಾಜರು ನೀರಿಗಾಗಿ ಕೆರೆಗಳ ಕಟ್ಟಿಸಿ ನೀರಾವರಿ ಸೌಲಭ್ಯದ ಜತೆಗೆ ನೀರಿನ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ್ದರು ಎಂದರು.

ಪ್ರಾಧ್ಯಾಪಕ ಸದಾಶಿವ, ಐಕ್ಯೂಎಸಿ ಸಂಯೋಜನಕಿ ಡಾ. ಮಹಿಮಾ ಜ್ಯೋತಿ, ಪಾಧ್ಯಾಪಕ ಡಾ. ಚಂದ್ರಬಾಬು ಮಾತನಾಡಿದರು.

ದೈಹಿಕ ನಿರ್ದೇಶಕ ಬಡೇಸಾಬ್ ನಾಯಕ, ಕೆ.ಎಂ. ಹರ್ಷ, ಎಸ್.ಬಿ. ಸಂಜಯ್, ಚಂದನಾ ಎಚ್.ಎಂ. ಚೈತ್ರ ಜೆ, ಕುಸುಮ ಎಚ್.ಎಂ. ಅನ್ನದಾನಪ್ಪ, ಎ.ಎಂ.ಪಿ. ಸಂದೀಪ ಹಾಗೂ ವಿದ್ಯಾರ್ಥಿಗಳು ಇತರರಿದ್ದರು.