ಕಾಡಾನೆಗಳ ಉಪಟಳ: ಹೆಚ್ಚಿದ ಹಾನಿ

| Published : Nov 09 2024, 01:02 AM IST

ಸಾರಾಂಶ

ಚಿಕ್ಕಮಗಳೂರು: ನೆರೆಯ ಸಕಲೇಶಪುರ ತಾಲೂಕಿನಿಂದ ಆಗಮಿಸಿ ಇಲ್ಲಿನ ತುಡುಕೂರು ಗ್ರಾಮದ ಬಳಿ ಬೀಡು ಬಿಟ್ಟಿರುವ ಕಾಡಾನೆಗಳು ಸಾಕಷ್ಟು ಹಾನಿ ಉಂಟು ಮಾಡುತ್ತಿವೆ.

ಚಿಕ್ಕಮಗಳೂರು: ನೆರೆಯ ಸಕಲೇಶಪುರ ತಾಲೂಕಿನಿಂದ ಆಗಮಿಸಿ ಇಲ್ಲಿನ ತುಡುಕೂರು ಗ್ರಾಮದ ಬಳಿ ಬೀಡು ಬಿಟ್ಟಿರುವ ಕಾಡಾನೆಗಳು ಸಾಕಷ್ಟು ಹಾನಿ ಉಂಟು ಮಾಡುತ್ತಿವೆ.

ತುಡುಕೂರು ಗ್ರಾಮದ ರವಿಗೌಡ ಅವರ ಕಾಫಿ ತೋಟದಲ್ಲಿ ಗುರುವಾರ ಬೀಡು ಬಿಟ್ಟಿದ್ದ ಸುಮಾರು 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡಾನೆಗಳು ಶುಕ್ರವಾರವೂ ಕೂಡ ಅದೇ ಸ್ಥಳದಲ್ಲಿ ಕಂಡು ಬಂದಿವೆ.

ಕಾಡಾನೆಗಳು ಬತ್ತದ ಗದ್ದೆಗಳು, ಕಾಫಿ ಗಿಡಗಳಿಗೆ ಸಿಂಪಡಿಸಲು ತೋಟಗಳಲ್ಲಿ ಇಟ್ಟಿದ್ದ ಬ್ಯಾರಲ್‌ಗಳು, ನೀರಿನ ಪೈಪ್‌ಗಳು, ಜನರೇಟರ್‌ಗಳನ್ನು ತುಳಿದು ಹಾಳು ಮಾಡಿವೆ. ಮನ ಬಂದಂತೆ ಓಡಾಡುತ್ತಿರುವುದರಿಂದ ಹಾನಿ ಪ್ರಮಾಣ ಹೆಚ್ಚಾಗುತ್ತಿವೆ.

ಕಳೆದ ನಾಲ್ಕು ದಿನಗಳ ಹಿಂದೆ ಸಕಲೇಶಪುರ ತಾಲೂಕಿನಿಂದ ಚಿಕನಹಳ್ಳಿ ಮಾರ್ಗವಾಗಿ ಬಂದಿರುವ ಕಾಡಾನೆಗಳ ಹಿಂಡು ಸದ್ಯ ತುಡುಕೂರು ಗ್ರಾಮದ ಬಳಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿವೆ. ಅವುಗಳು ಬಂದ ದಾರಿಯಲ್ಲಿಯೇ ವಾಪಸ್‌ ಹೋಗುವವರೆಗೆ ಇನ್ನಷ್ಟು ಹಾನಿ ಸಂಭವಿಸಲಿದೆ ಹಿನ್ನಲೆಯಲ್ಲಿ ಕಾಡಾನೆಗಳ ಮೇಲೆ ಅರಣ್ಯ ಇಲಾಖೆಯವರು ನಿಗಾ ಇಟ್ಟಿದ್ದಾರೆ.ಒಂಟಿ ಸಲಗ ಪ್ರತ್ಯೇಕ್ಷ:

ಕಳಸ ತಾಲೂಕಿನ ಕುದುರೆಮುಖ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ಒಂಟಿ ಸಲಗ ಪ್ರತ್ಯೇಕ್ಷವಾಗಿದೆ. ಕಳಸ, ಕುದುರೆಮುಖ, ದಕ್ಷಿಣ ಕನ್ನಡ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 5 ಗಂಟೆ ವೇಳೆಗೆ ಕಾಡಾನೆ ರಸ್ತೆಯ ಪಕ್ಕದಲ್ಲಿ ಕಂಡು ಬಂದಿದ್ದು, ವಾಹನಗಳ ಬೆಳಕು ಕಂಡು ಬಂದರೂ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಕಾಡಿನೊಳಗೆ ತೆರಳಿದೆ. ಇದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶವಾಗಿದ್ದು, ಕಾಡಾನೆಗಳು ಆಗಾಗ ಓಡಾಡುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.ಪೋಟೋ ಫೈಲ್‌ ನೇಮ್‌ 8 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದ ಬಳಿ ಕಾಡಾನೆಗಳು ಬ್ಯಾರಲ್‌ಗಳನ್ನು ತುಳಿದು ಹಾಳು ಮಾಡಿರುವುದು.