ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯ ವಿಭಾಗದ ಬಿದಿರುತಳ ಗುಡ್ಡದಲ್ಲಿ ಭಾನುವಾರ ರಾತ್ರಿ ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗುಡ್ಡದ ಮೇಲಿನ ಅರಣ್ಯ ಪ್ರದೇಶದಲ್ಲಿ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಯ ಜ್ವಾಲೆಗಳು ದೂರದಿಂದಲೇ ಕಾಣಿಸಿಕೊಂಡವು.

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯ ವಿಭಾಗದ ಬಿದಿರುತಳ ಗುಡ್ಡದಲ್ಲಿ ಭಾನುವಾರ ರಾತ್ರಿ ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗುಡ್ಡದ ಮೇಲಿನ ಅರಣ್ಯ ಪ್ರದೇಶದಲ್ಲಿ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಯ ಜ್ವಾಲೆಗಳು ದೂರದಿಂದಲೇ ಕಾಣಿಸಿಕೊಂಡವು.ಅರಣ್ಯ ಪ್ರದೇಶದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ ಹುಲ್ಲು ಗಾವಲು ಸೇರಿದಂತೆ ಅರಣ್ಯ ಸಂಪತ್ತು ಸುಟ್ಟು ಕರಕ ಲಾಗಿದೆ. ಈ ಅಗ್ನಿ ಅವಘಡದಲ್ಲಿ ಕಿಡಿಗೇಡಿಗಳ ಕೃತ್ಯ ವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.ಘಟನೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿಗಳಾದ ರಂಜಿತ್ ಹಾಗೂ ಬಸವರಾಜ್, ಗಸ್ತು ಅರಣ್ಯ ಪಾಲಕ ಉಮೇಶ್, ಅರಣ್ಯ ಸಿಬ್ಬಂದಿಗಳಾದ ದಿನೇಶ್, ಅರುಣ್ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಣಕ್ಕೆ ತಂದರು.ಅಗ್ನಿ ನಂದಿಸದಿದ್ದರೆ ಬೆಂಕಿ ಇನ್ನಷ್ಟು ವ್ಯಾಪಿಸಿ ಅರಣ್ಯಕ್ಕೆ ಭಾರೀ ಹಾನಿ ಆಗುವ ಸಾಧ್ಯತೆ ಗಳಿದ್ದವು. 19 ಕೆಸಿಕೆಎಂ 4ಚಾರ್ಮಾಡಿ ಘಾಟಿಯ ಬಿದಿರುತಳ ಗುಡ್ಡದಲ್ಲಿ ಅರಣ್ಯಕ್ಕೆ ಬಿದ್ದಿರುವ ಬೆಂಕಿಯನ್ನು ಅರಣ್ಯ ಇಲಾಖೆಯವರು ನಂದಿಸುತ್ತಿರುವುದು.