ಸಾರಾಂಶ
ಕೆಮ್ಮಣ್ಣಗುಂಡಿ ಬಳಿ ಇರುವ ಝಡ್ ಪಾಯಿಂಟ್ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಣಗಿದ ಹುಲ್ಲುಗಾವಲಿಗೆ ಬೀಸುವ ಗಾಳಿಗೆ ಬೆಂಕಿ ವೇಗವಾಗಿ ಹರಡಿಕೊಂಡಿತ್ತು. ಅರಣ್ಯ ಇಲಾಖೆ ಅಂದಾಜು ಮಾಡಿರುವ ಪ್ರಕಾರ ಸುಮಾರು 5 ಎಕರೆಯಷ್ಟು ಹುಲ್ಲುಗಾವಲು ಪ್ರದೇಶ ಸುಟ್ಟು ಹೋಗಿದೆ.
ತರೀಕೆರೆ: ಪಶ್ಚಿಮಘಟ್ಟದ ಗಿರಿ ಸಾಲಿನಲ್ಲಿರುವ ಕೆಮ್ಮಣ್ಣಗುಂಡಿ ಬಳಿ ಇತ್ತೀಚೆಗೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು.
ಕೆಮ್ಮಣ್ಣಗುಂಡಿ ಬಳಿ ಇರುವ ಝಡ್ ಪಾಯಿಂಟ್ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಣಗಿದ ಹುಲ್ಲುಗಾವಲಿಗೆ ಬೀಸುವ ಗಾಳಿಗೆ ಬೆಂಕಿ ವೇಗವಾಗಿ ಹರಡಿಕೊಂಡಿತ್ತು. ಅರಣ್ಯ ಇಲಾಖೆ ಅಂದಾಜು ಮಾಡಿರುವ ಪ್ರಕಾರ ಸುಮಾರು 5 ಎಕರೆಯಷ್ಟು ಹುಲ್ಲುಗಾವಲು ಪ್ರದೇಶ ಸುಟ್ಟು ಹೋಗಿದೆ.
ಡಿಆರ್‌ಎಫ್‌ಓ ಚಂದ್ರಪ್ಪ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಫೈರ್ ವಾಚರ್‌ಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಹತೋಟಿಗೆ ಬರದೆ ಹೋಗಿದ್ದರೆ, ಸಮೀಪದಲ್ಲಿರುವ ಶೋಲಾ ಕಾಡಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತಿತ್ತು. ಅಲ್ಲಿರುವ ಪ್ರಾಣಿ ಪಕ್ಷಿ ಸಂಕುಲದ ಜೀವಕ್ಕೆ ಅಪಾಯವಾಗುತ್ತಿತ್ತು. 20 ಕೆಸಿಕೆಎಂ 5
ಕೆಮ್ಮಣ್ಣಗುಂಡಿಯ ಝಡ್ ಪಾಯಿಂಟ್ ಸಮೀಪದಲ್ಲಿ ಕಾಡ್ಗಿಚ್ಚು ಹಬ್ಬಿರುವುದು.