ಅರಣ್ಯಾಧಿಕಾರಿ ಎಸ್.ಜಿ. ಹೆಗಡೆ ಬೀಳ್ಕೊಡುಗೆ

| Published : Feb 03 2024, 01:47 AM IST

ಸಾರಾಂಶ

೩೯ ವರ್ಷಗಳ ಕಾಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಷ್ಟೊಂದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಎಸ್.ಜಿ. ಹೆಗಡೆಗೆ ಅವರ ಪತ್ನಿ ನೀಡಿದ ಸಹಕಾರ ಹಾಗೂ ತ್ಯಾಗ ಮನೋಭಾವಕ್ಕೆ ಇಲಾಖೆ ಸಂಪೂರ್ಣ ಋಣಿಯಾಗಿದೆ.

ಯಲ್ಲಾಪುರ:

ನನ್ನ ಸುದೀರ್ಘ ಕರ್ತವ್ಯಾವಧಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕಯಿಂದ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದು ಯಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎಸ್.ಜಿ. ಹೆಗಡೆ ಹೇಳಿದರು.

ಪಟ್ಟಣದ ಅರಣ್ಯ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಯಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಿ.ಪಿ. ಹರ್ಷಾಬಾನು ಮಾತನಾಡಿ, ೩೯ ವರ್ಷಗಳ ಕಾಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಷ್ಟೊಂದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಎಸ್.ಜಿ. ಹೆಗಡೆಗೆ ಅವರ ಪತ್ನಿ ನೀಡಿದ ಸಹಕಾರ ಹಾಗೂ ತ್ಯಾಗ ಮನೋಭಾವಕ್ಕೆ ಇಲಾಖೆ ಸಂಪೂರ್ಣ ಋಣಿಯಾಗಿದೆ ಎಂದರು.ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ.ಕೆ.ಪಿ., ಹೆಗಡೆ ಅವರು ಇಲಾಖೆಯ ಕಾನೂನನ್ನು ಪರಿಪೂರ್ಣ ಅರಿತು, ಕಾರ್ಯ ನಿರ್ವಹಿಸಿದರು. ಆದ್ದರಿಂದಲೇ ಅವರು ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯವಾಯಿತು. ನಮ್ಮಂತಹ ಯುವಕರಿಗೆ ಅವರಿಂದ ಅಗತ್ಯ ಮಾರ್ಗದರ್ಶನ ದೊರೆತಿದೆ, ಮುಂದೆಯೂ ಅವರ ಮಾರ್ಗದರ್ಶನ ದೊರೆಯುವಂತಾಗಬೇಕು ಎಂದರು. ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಡಿಸಿಎಫ್‌ ಡಿ.ಆರ್. ನಾಯಕ ಕಾತೂರು, ಶಿರಸಿ ಎಸಿಎಫ್‌ ಪ್ರಕಾಶ ಶೆಟ್ಟಿ, ಆರ್‌ಎಫ್‌ಒಗಳಾದ ಎಂ.ಎಚ್. ನಾಯಕ, ವಾಗೀಶ, ಗಜಾನನ ಹೆಗಡೆ, ಎಸಿಎಫ್‌ ಆನಂದ ಎಚ್.ಎ, ಎಫ್‌ಡಿಎ ಪರಶಿವಮೂರ್ತಿ, ಶ್ರೀಶೈಲ ಐನಾಪುರ, ಮಂಚೀಕೇರಿ ಆರ್‌ಎಫ್‌ಒ ಅಮಿತ್ ಚವ್ಹಾಣ್ ಇದ್ದರು.